ಭಕುತ ಜನ ಮುಂದೆ ನೀನವರ ಹಿಂದೆ - ಇದಕೆ |ಯುಕುತಿ ಕೈಕೊಳದಯ್ಯ ಗಯಾಗದಾಧರನೆ ಪಕಟ್ಟೆರಡು ಕೂಡಿ ತಾ ನದಿಸೂಸಿ ಹರಿವಾಗ |ಕಟ್ಟುಕ್ಕಿದಾಗ ಹರಿಗೋಲ ಹಾಕೆ ||ನೆಟ್ಟನೆ ಜಿಗಿಜಿಗಿದು ದಾಟಿ ತಾ ಪೋಪಾಗ |ಹುಟ್ಟು ಮುಂದಲ್ಲದಲೆ ಹರಿಗೋಲು ಮುಂದೆ? 1ಕಾಳೆಹೆಗ್ಗಾಳೆದುಂದುಭಿನಾನಾ ವಾದ್ಯದಿಂ |ಓಲಗದಿಂದೈದೆ ಅರಸು ತಾ ಬರುವಾಗ ||ಸಾಲಾಗಿ ಬಳಿವಿಡಿದು ಸಂಭ್ರಮದಿ ಇರುವಾಗ |ಆಳು ಮುಂದಲ್ಲದೆ ಅರಸು ತಾ ಮುಂದೆ 2ಉತ್ಸವ ಮೂರುತಿಯು ಬೀದಿ ಮೆರೆಯುತ ಬರಲು |ಸತ್ಸಂಗತಿಗೆ ಹರಿದಾಸರೆಲ್ಲ ||ಅಚ್ಚ ಸಿರಿಯರಸು ಸಿರಿಪುರಂದರ ವಿಠಲನೆ |ವತ್ಸಮುಂದಲ್ಲದೆಧೇನುತಾ ಮುಂದೆ?