ಪ್ರಾರಂಭ ಪದದ ಹುಡುಕು
ಘಟಿಕಾಚಲದಿ ನಿಂತ-ಶ್ರೀ ಹನುಮಂತ ಪಘಟಿಕಾಚಲದಿ ನಿಂತ-ಪಟು ಹನುಮಂತ ತನ್ನಪಠನೆಯ ಮಾಡಲುತ್ಕಟದಿ ಪೊರೆವೆನೆಂದು ಅ.ಪಚತುರ ಯುಗದಿ ತಾನು-ಮುಖ್ಯ ಪ್ರಾಣ- ಚತುರ ಮುಖನಯ್ಯನ |ಚತುರಮೂರ್ತಿಗಳನು ಚತುರತನದಿ ಭಜಿಸಿ |ಚತುರ್ಮುಖವಾಣಿ ಜಗಕೆ ಚತುರ್ವಿಧ ಫಲವ ಕೊಡುತ 1ಸರಸಿಜಭವಗೋಸುಗ- ಕರ್ಮಠ ದೂಮವರಚಕ್ರತೀರ್ಥಸರ |ಮೆರೆವ ಛಲದಿನಿತ್ಯನರಹರಿಗೆದುರಾಗಿಸ್ಥಿರ ಯೋಗಾಸನದಲಿ ಕರೆದು ವರಗಳ ಕೊಡುತ 2ಶಂಖಚಕ್ರವ ಧರಿಸಿ-ಭಕ್ತರ ಮನಃ-ಪಂಕವ ಪರಿಹರಿಸಿ |ಪಂಕಜನಾಭಶ್ರೀ ಪುರಂದರವಿಠಲನ |ಬಿಂಕದ ಸೇವಕ ಸಂಕಟ ಕಳೆಯುತ 3
ಘನಾನಂದ ನಿಬಿಡವು ತಾನೇ ತಾ |ಮನಬುದ್ಧಿಗಳು ಏನಿಲ್ಲಪಮಹಾಮಾಯಾಮಾಯಾಅವ್ಯಾಕೃತಿ |ಆಹಿರಣ್ಯಗರ್ಭವಿರಾಟಲ್ಲ1ಸ್ಥೂಲ ಸೂಕ್ಷ್ಮ ಕಾರಣ | ಮಹಾಕಾರಣಜಾಗ್ರತ್, ಸ್ವಪ್ನ, ಸುಷುಪ್ತಿಉನ್ಮನಿಬೆಳಕೆಲ್ಲ ||ಇದ್ದದ್ದು ಶಂಕರನ ಸುಖವಲ್ಲವೆ |ವಿದ್ಯಾ ಅವಿದ್ಯೆಯ ಕಲಕಿಲ್ಲ ||
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3