ದಾಸ ಪಟ್ಟವೋ ಸನ್ಯಾಸ ಪಟ್ಟವೋ ಪ
ಆಸೆಯಿಂದ ನೆಲೆಯಾದಿಕೇಶವನ್ನ ನೆನೆಯದವಗೆಅ
ಮಂಡೆ ಬೋಳು ಮಾಡಿ ನಾಮದುಂಡೆಯನ್ನು ಬರೆದು ಕೆಡಿಸಿಕಂಡಕಂಡವರನು ಕೂಡಿಭಂಡ ಜನ್ಮ ಹೊರೆಯುವವಗೆ 1
ಅವರಿವರ ಕೈಯ ನೋಡಿ ಹ-ಲವು ಕೆಲವು ಮಾತನಾಡಿ ಹ-ಲವ ಹಂಬಲಿಸಿ ದಿ-ನವ ಕಳೆದು ಉಳಿದು ಬಾಳುವಗೆ 2
ಬೆಂದ ಸಂಸಾರವೆಂಬಬಂಧನದೊಳಗೆ ಸಿಲುಕಿಕೊಂಡುಚೆಂದಾದಿಕೇಶವನ್ನಒಂದು ಬಾರಿ ನೆನೆಯದವಗೆ 3