ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರೌದ್ರಿ ಭದ್ರಿ ಮಹಕ್ಷುದ್ರ ಛಿದ್ರಿ ಹಿ ಮಾದ್ರಿಯುದ್ಭವಿಗೆ ನಮೋ ನಮೋ ಪ ರುದ್ರರೂಪೆ ದಾರಿದ್ರ್ಯಮರ್ದನಿ ರುದ್ರನರ್ಧಾಂಗಿಗೆ ನಮೋ ನಮೋ ಅ.ಪ ನಿಗಮಾತೀತೆ ಮಹದಾಗಮನುತೆ ತ್ರೈ ಜಗದ ಮಾತೆಗೆ ನಮೋ ನಮೋ ಸುಗುಣಸಂತಜನರಘನಾಶಿನಿ ಸುಖ ಸ್ವರ್ಗಾಧಿಕಾರಿಗೆ ನಮೋ ನಮೋ 1 ಮೃಡಮೃತ್ಯುಂಜನನೆಡದೊಡೆಯೊಳು ಕಡುಸಡಗರವಾಸಿಗೆ ನಮೋ ನಮೋ ದೃಢತರ ಭಕ್ತರ ದೃಢದ್ವಾಸಿನಿ ಜಗ ದೊಡೆಯ ಮೃಡಾಣಿಗೆ ನಮೋ ನಮೋ 2 ಕಮಲೆ ಕಾತ್ಯಾಯಿನಿ ಉಮೆ ಶಿವೆ ಸಾವಿತ್ರಿ ಕಮಲನೇತ್ರೆಗೆ ನಮೋ ನಮೋ ಸುಮನ ಸೌಭಾಗ್ಯ ಶಮೆ ದಮೆ ದಯಾನ್ವಿತೆ ವಿಮಲ ಚರಿತ್ರೆಗೆ ನಮೋ ನಮೋ 3 ಭಂಡದನುಜಕುಲ ರುಂಡ ಚೆಂಡಾಡಿದ ಪುಂಡ ಉದ್ದಂಡೆಗೆ ನಮೋ ನಮೋ ಖಂಡ ಕಿತ್ತು ಖಳರ್ಹಿಂಡು ಭೂತಕಿತ್ತ ಚಂಡಿ ಚಾಮುಂಡಿಗೆ ನಮೋ ನಮೋ 4 ರಕ್ತಬೀಜರೆಂಬ ದೈತ್ಯರ ಮದ ಮುರಿ ದೊತ್ತಿದ ವೀರೆಗೆ ನಮೋ ನಮೋ ಮತ್ತೆ ಶುಂಭರ ಶಿರ ಮುತ್ತಿ ಕತ್ತಿರಿಸಿದ ಶಕ್ತಿ ಶಾಂಭವಿಗೆ ನಮೋ ನಮೋ 5 ಓಂಕಾರರೂಪಿಣಿ ಹ್ರೀಂಕಾರಿ ಕಲ್ಯಾಣಿ ಶಂಕರಿ ಶರ್ವಾಣಿಗೆ ನಮೋ ನಮೋ ಮ ಹಂಕಾಳಿ ನತಸುಖಂಕರಿ ಪಾರ್ವತಿ ಶಂಕರನರಸಿಗೆ ನಮೋ ನಮೋ 6 ಶೌರಿ ಔದರಿಯ ಶಾರದೆ ಶ್ರೀಕರಿ ಶೂರ ಪರಾಂಬೆಗೆ ನಮೋ ನಮೋ ಪಾರಾವಾರ ದಯೆಕಾರಿ ನಿರಾಮಯೆ ಧೀರ ಚಿದ್ರೂಪೆಗೆ ನಮೋ ನಮೋ 7 ಉಗ್ರರೂಪಿ ಭವನಿಗ್ರಹ ದುಷ್ಟ ಸ ಮಗ್ರ ಹರಿಣಿಗೆ ನಮೋ ನಮೋ ಆಗ್ರಭಕ್ತರಿಷ್ಟ ಶೀಘ್ರ ಕೊಡುವ ಜೈ ದುರ್ಗಾದೇವಿಗೆ ನಮೋ ನಮೋ 8 ಹೈಮಾವತಿಯೆ ನಿರ್ಮಾಯೆ ಮೂರುತಿ ಕೋಮಲ ಹೃದಯೆಗೆ ನಮೋ ನಮೋ ಭೀಮಪರಾಕ್ರಮಿ ರಾಮದಾಸಜನ ಪ್ರೇಮಪೂರ್ಣಿಗೆ ನಮೋ ನಮೋ 9
--------------
ರಾಮದಾಸರು
ಸುರತಟನೀಧರನರಸೀ |ಪೊರೆಪಾರ್ವತಿ ದೇವಿಯೇ |ಕರುಣಾಕರೇ ದುರಿತಹರೇ | ಶರಣರ ಸಂಜೀವಿಯೆ 1ಕಂಕಣಕರೆ ಕುಂಕುಮಧರೆ | ಪಂಕಜದಳ ನೇತ್ರೆಯೆ |ಶಂಕರಿ ಭವಬಿಂಕಹರೇ | ಕಿಂಕರನುತಿ ಪಾತ್ರೆಯೇ 2ಚಂಡಿಯೆ ಚಾಮುಂಡಿಯೇ | ಪ್ರಚಂಡಿಯೆ ಓಂಕಾರಿಯೆ |ಚಂಡನ ಖಳಮುಂಡನ ಶಿರÀ | ಖಂಡನೆ ಹ್ರೀಂಕಾರಿಯೇ 3ಜ್ವಾಲಿನಿ ಮಹಮಾಲಿನಿ ದಯೇ | ಶೀಲೆ ನೀ ಶರ್ವಾಣಿಯೆ |ಕಾಳಿನಿ ಮಹಾ ಕಾಳಿನಿರಣ| ಶೂಲಿನೀ ರುದ್ರಾಣಿಯೆ 4ಸುಂದರಿ ಗುಣಮಂಜರಿ ಪೂರ್ಣೇಂದು ಸಂಕಾಶಿಯೇ |ಚಂದದಿ ಗೋವಿಂದನ ದಾಸ| ವಂದಿತೆ ಅಘನಾಶಿಯೆ 5
--------------
ಗೋವಿಂದದಾಸ