ಶರಣು ವಾಯು ತನುಜ ಶರಣು ಭಾಸ್ಕರÀ ತೇಜ |
ಶರಣು ರಾಜಾಧಿರಾಜ | ಶರಣು ಗೋಸಹಜ |
ಶರಣಾರ ಸುರಭೋಜ ಪ
ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ |
ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ |
ಹೇಮ |
ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ |
ಪತ್ರ ಪಾದವ ಕಾ | ಲತ್ರಯ ನೆನೆಸುವನೆ 1
ಇದೆ ಭಾಗ್ಯ ನಾನಾವದೂ ಒಲ್ಲೆ |
ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ |
ಪ್ರಾಣಪಾವನ ಲೀಲ | ದಾನವರ ಕುಲಕಾಲ |
ಏನೇನು ಮಾಳ್ಪಾಧಿಷ್ಠಾನದಲಿ |
ನೀನೇ ನಾನೆಲ್ಲಿ ಎಣೆಗಾಣೆ2
ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ |
ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು |
ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ |
ನಿತ್ಯ |
ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು 3
ದಾತ |
ರೋಮ ರೋಮ ಕೋಟಿ ಕಾಮ ಸಂಹಾರನೇ |
ಭೂಮಂಡಲಧರನೆ ಭೀಮಶೈನ |
ಭೀಮ ರಿಪು ಗಂಟಲಗಾಣ | ತಾಮಸ ಜ್ಞಾನವಳಿ |
ಸುಳಿ | ಶ್ರೀ ಮದಾನಂದತೀರ್ಥ4
ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ |
ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ |
ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ |
ದಾಸರೊಳಧಿಕ ನಿನ್ನ ಲೇಶವಾದರು ಬಿಡೆ |
ನಾ ಸರ್ವಥಾ ಕರೆ | ತೋಷದಲಿಡುವುದೆನ್ನ 5