ಅವನೆವೆ ಯೋಗ್ಯ ನೋಡಿರೈ ಭಕುತಿಗೆ |
ಸಾಯಾಸವಿಲ್ಲದ ಯೈದನವನಿಯೊಳಗ ಮುಕುತಿಗೆ ಪ
ನಿತ್ಯ ಶ್ರವಣ ಮಾಡಲೆಂದು ಬ್ಯಾಸರಾ |
ಹ್ಯಾವ ಹೆಮ್ಮೆಯಲ್ಲಿ ಕಳಿಯ ವ್ಯರ್ಥವಾಸರಾ |
ನೋವ ಮಾಡುತಿರಲು ತಾಪತ್ರಯದ ತೂರಾ | ಬಳಲ
ಆವಗಿರುವ ಕೂಡಿಕೊಂಡು ಹರಿಯ ದಾಸರಾ 1
ನ್ಯೂನ ನೋಡದೆ ಪರರ ಸದ್ಗುಣವನೆ ಕೊಂಬನು | ದಂಭ |
ಮಾನ ತೊರೆದು ಸ್ತುತಿಯ ನಿಂದ್ಯ ಸರಿಯ ಕಾಂಬನು |
ಜ್ಞಾನದಿಂದ ಪಡೆದು ಗುರುಹಿರಿಯರಿಂಬನು | ತ್ವರಿತ |
ಸ್ವಾನುಭವದ ಸೌಖ್ಯಸಾರ ಸವಿಯನುಂಬನು 2
ಬಲಿದು ಭಾವನಿಂದ ತಿಳಿದು ಸ್ವಹಿತುಪಾಯನು ದೃಢದಿ |
ಹುಲು ಮನಿಜರಿದಿರ ಹೋಗಿ ದೆರಿಯ ಬಾಯನು |
ತಳೆದು ವೇಷದಿಂದ ದಣಿಸವಾವ ಕಾಯನು | ಹೃದಯ |
ದೊಳನವನ ನಲುವ ಗುರುಮಹಿಪತಿ ಪ್ರೀಯನು 3