ಹ್ಯಾಗಾಗುವುದೊ ತಿಳಿಯದು ಈಶನಜ್ಞೆ ಪ
ಭಾಗವರತ ಸೇವೆಯಲ್ಲಿ ಬಹು ಪ್ರವೀಣವೆನೆಪುದೊ
ರಾಗಲೋಭದಲ್ಲಿ ಮುಳುಗಿಸಿ ರಚ್ಚೆಗಿಕ್ಕಿ ಬಿಡುವುದೊ ಅ.ಪ
ಕೋರಿಕೆಗಳ ಬಿಡಿಸಿ ಸದಾ ಗುಣವಂತನೆನಿಸುವುದೊ
ನಾರಿ ಮಕ್ಕಳಾಸೆಯಲಿಯನಾಥವ ಮಾಡಿಸುವುದೊ 1
ದ್ವಂದ್ವಗಳಲಿಲೇಪವಿಲ್ಲದಾನಂದವ ಪೊಂದಿಸುವುದೊ
ಮಂದಮತಿಯನಿಸುವುದೊ 2
ಶ್ರವಣಮನನ ಸಾಧನೆಗಳ ಸದಾ ಮಾಡಿಸುವುದೊ
ಭವಭವದಲಿ ಮೂಢನೆನಿಸಿ ಪಾಪರತನ ಮಾಳ್ವದೊ 3
ಸರ್ವರಲ್ಲಿ ಗುಣವೆ ಕಾಣಿಸಿ ಸಂತೋಷಪಡಿಸುವುದೊ
ದುರ್ವಿನೀತನೆನಸಿ ಸದಾ ದುಷ್ಕಾರ್ಯ ಮಾಡಿಸುವುದೊ 4
ಪಂಚಭೇದ ಜ್ಞಾನ ತತ್ವ ತಿಳಿಸಿ ಸುಖಿಪುದೊ
ದುರಹಂಕಾರರಲ್ಲಿ ಮೆರೆಸಿ ನರಕದಿ ಬೀಳಿಸುವುದೊ 5
ದಾನಧರ್ಮ ಪರೋಪಕಾರ ದಯಾವಂತನೆನಿಪುದೊ
ಹೀನನೆನಸಿ ಸಕಲರಿಂದ ಹೀಯ್ಯಾಳಿಸಿಬಿಡುವುದೊ 6
ಭಾರ ಅವರವರಧಿಕಾರದಂತೆ ಎಲ್ಲರಿಗೂ ನಡಿಸುವಾ 7