ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಗ್ರಾಮ ಭಾಷೆಯಲ್ಲಿ)ದಂಗೈನಿ ಗೋಪಮ್ಮ ನಿಮ್ಮ ಮಗನೊಂಚುಮನಿಗೆ |ಹಂಗರೀಸು ಬುದ್ಧಿ ಹೇಳುಗಾಗ್ದ ಕೃಷ್ಣೈಯ್ಯಂಗೆ ||ವಂಗಲ್ಸೀ | ಕೇಣ್ಗತಾಯೆ | ಹೇಳ್ಕುತೀನಿಂಪಾದ್ದಂಗೆಂ |ರಂಗಯ್ಯಾನ ಲೂಟಿ ತಡ್ಕಂಬುಕಾತ್ತಿಲ್ಯೇ ನಮ್ ಕೈಯ್ಯಂಗೇ ಪಮೋಳ್ ಬೆಕ್ಕಿನಾಂಗ ಬಂದು ನಮ್ಮ ನೆಂಗಿದ್ದೆಲ್ಲಾ |ಹಾಲ್ ಮೊಸರ್ ಕುಡ್ಕ ಹ್ವಾರ್ | ಕೊರ್ಲಾಣಿ ಸುಳ್ಳಲ್ಲಾ ||ಮಾಳ್ಗಿಲದ್ ತುಪ್ಪ ನೊಂದ್ ಚಿಪ್ಪಾರ್ ಬೆಚ್ಲಿಲ್ಲೇ |ಅಳ್ಗಿಲಿದ್ ಬೆಣ್ಣೆ ಬರ್ಚಿ | ಬಾಯ್ಮೇಲ್ ಹ್ಯಾಕ ಹೋರಲೆ 1ಗೊಲ್ಲರೆಣ್ಗಳ್ ಮನಿಯಂಗಿ ವೃದ್ | ಗುಲ್ಲೆ ಗುಲ್ಲ್ ತಾಯಿ |ಎಲ್ ಗಂಟಿಂ ಕೇಂಡ್ರು ಬರು ಹೈಲೇ ಹೈಲ್ |ಮುಲ್ಲಿಂದ್ ಮುಲ್ಲಿ | ಗ್ ವಾಂಜಿಲಾಡುದೆಂತ್ ಚಲ್ಲೇಚಲ್ಲ್ ||ಮೆಲ್ಲಂಕ್ಯಾಂಡ್ರ ಹೇಳುದ್ ಪೂರ ಸುಳ್ಳೇ ಸುಳ್ಳ್ 2ಶಣ್ಣರಂತ್ರಿ ನಿಮ್ ಮಗ ಪೂತನೀನ್ ಹ್ಯಾಂಕೊಂದ್ರು ||ಶಂಣ್ ಕಾಲಂಗೆ ತೊಳ್ದಿ | ಕಿದಡ್ ಗಾಡಿನ್ಯಾಂಗೆ ಮುರದ್ರ್ |ಮಣ್ ತಿಂದ್ ಬಾಯಾಂಗೆಲ್ಲ | ಲೋಕನ್ಯಾಂಗೆ ತೋರ್ಸ್ರ್|ಕಣ್ ಮಾಯಾಕ ಮಾಡಿ | ಹಾರ್ಸರೆ ತಿರ್ಣವರ್ತನ ತೀರ್ಸರ್ 3ಜಿಡ್ಡಿ ಒರ್ಲಿಗ ಕಟ್ರಕಾಣಿ | ಅಡ್ದೆ ಹ್ಯಾಕ ಎಳ್ದ್ರ್ |ದಡ್ ದಡ್ ಮತ್ತಿಮರು | ಎಯ್ಡ್ ಮುರ್ದುಕೆಡ್ದ್ರು |ಕಡ್ಡಿದೊಣ್ಣೆ ಹಿಡ್ಕ ಆಡೋ ಮಕ್ಕಳಂತ್ರಿ ಕಾಂತ್ |ಗಡ್ಡ ಹಣ್ಣಾದ್ಯತಿಗಳ್‍ವ್ರಿಗಡ್ಡ ಬದ್ದಿಕಿ ಹೋತ್‍ರಿ 4ಸಿಟ್ ಗಂಡಳ್‍ಂದ್ ನನ್ನ ತೊಟ್‍ಕಾ ಮುತ್ ಕೊಟ್ರು |ಹೊಟ್ಟೆ ಮೇಲ್ ಹೊಟ್ಟೆ ಬೆಚ್ಚಿ | ಲೊಟ್ಟಿಂಗ್ ಪಟ್ಟಂಗ್ ಕುಟ್ರು |ಕೆಟ್ಟಾರ್ ಬೈದನನಗಂಡ| ಕೇಂಡ್ರೆ ವಿರಾಣ ಬೆಚ್ಚ್ರೆ |ಸಿಸ್ಟಿಪತಿ ಗೋವಿಂದ್ಮೂರ್ತಿದಾಸರ್‍ಗೆಲ್ಲಾ ಶ್ರೇಷ್ಟ್ರ್5
--------------
ಗೋವಿಂದದಾಸ
ಇಂಥ ಬುದ್ಧಿಯಲ್ಲಿ ಸೇರಿತೊ ಕೃಷ್ಣ ಗೋಕುಲದೊಳುಎಂಥವರೂ ನಿನ್ನ ದೂರು ಹೇಳುತಿಪ್ಪರೊ ಹೀಗಾದರೆ ನಿಲ್ಲರೋ ಪಗಂಡನುಳ್ಳ ನಾರಿಯರಾ ಮಂದಿಯೆಲ್ಲ ನೋಡ ಬಲು ಉ-ದ್ದಂಡತನದಲ್ಲಿ ಸೀರೆ ಸೆರಗ ಪಿಡಿವರೇ ಇಂಥ ದುಡುಕು ಮಾಡುವರೇ ||ಚಂಡಾಡುವಾಗೆನ್ನವಸನ ಮರೆತೆ ಕೊಂಡು ಪೋಗಲವಳು |ಕಂಡು ಕೊಸರಿಕೊಂಡರಿಂಥ ಸುದ್ದಿ ಹುಟ್ಟಿಸಿ ಪೇಳುವಳಮ್ಮ ಹೊಂದಿಸಿ 1ಹಿರಿಯರುಳ್ಳಾ ಸೊಸೆಯ ಕೂಡ ಒಗೆತನವ ಕೆಡಿಸುವಂತೆ |ಸರಸವಾಡುವದು ನಿನಗೆ ಸಲ್ಲುವದೇನೋ ಯನಗೆ ಭೂಷಣವೇನೋ ||ನಿರುತ ಅವಳ ತಾಯಿ ನಂದಗೋಪಗಣ್ಣಾಯೆಂದು ಕರೆಯ- |ಲರಿತೆನತ್ತೆ ದುಗಳು ನಾದಿನಿಯೆಂದು ಮನಸಿಗೆ ಚರ್ಚೆ ಮಾಡಿದೆನೀ ಬಗೆ2ಕುಲದೇವತೆಯ ಮೀಸಲು ತುಪ್ಪ ನೆಲವಿನ ಮೇಲಿಟ್ಟಿರಲು ಮದ್ದು |ಕಲಶವ ಒಡೆದು ಬಾಹುವದೆಲ್ಲ ಚಿನ್ನಾಟವೇನೋ, ಅವರು ಮುದ್ದಿಸುವರೇನೋ ||ತಿಳಿಯದೆ ನೆಳಲಿದುಯೆಂದು ಕಳ್ಳನ ಒಳಗಿರಿಸಿಹಳೇಕೆಂದು ವಡದೆ |ನೆಲಖರಿಧೋಗುವಘೃತನೋಡಲೆ ತಿಂದೆನಮ್ಮಯ್ಯ ತಪ್ಪಿರೆ ಕಟ್ಹ್ಯಾಕು ಕಯ್ಯ 3ಚಿನ್ನನಂತೆಯಾಗಿಯವರ ಮಗ್ಗುಲೊಳು ಮಲಗಿಯೆಂಥ |ಸಣ್ಣ ಕೃತ್ಯ ಮಾಡಿ ಬಾಹುವೆಂತಲ್ಲೋ ಕಂದ ಕೇಳುವರಿಗೇನುಛಂದ||ನಿನ್ನ ಸಲಿಗೆ ಬಹಳ ಕಂಡು ಇಲ್ಲದ್ದೊಂದೆ ಹುಟ್ಟಿಸುವರು |ಯನ್ನ ದಿಸವಕ್ಕೀ ಜಾರತ್ವ ಕಲಿತಿದ್ದೇನೇನೇ ನಿನಗೇನೂ ತಿಳಿಯದೇನೇ 4ಕದ್ದು ಮೊಲೆಯುಂಡು ಕರು ಬಿಟ್ಟು ಹರಕೊಂಡಿತು ನೋಡಿರಿ ಎಂಬೆಯಂತೆ |ದುಗ್ಧವೆಮಾರಿಬಾಳಿವೆ ಮಾಡುವರೆಂತು ತಾಳುವರೋ ಹೀಗಾದರೆ ನಿಲ್ಲರೋ ||ಇದ್ದಾ ಮನೆಯವರಿಗೆ ನಂಬವು ಅಂಥಾಲಾಳ ಮೊಲೆಯ ನಾನುಂಡರೆ ಮೋರೆಗೆ |ಒದ್ದರೆ ರೋದನ ಮಾಡುತ ನಿನ್ನ ಬಳಿಗೊಂದಿನ ಬಾರೆನೇ ಹುಡುಗರಿಗಂಬುವ ಮಾತೇನೇ 5ಇಡಲುದಕವ ಬೆರಸಿ ಮಜ್ಜನಕೆ ಛಲದಿಂದಲಿ ಚಲ್ಲಿ ಬಾಹುವರೇ |ಬಡಿವೆನೊ ನಾ ತಾಳದೆ, ಮುದ್ದಾದರೆ ಮತ್ತೊಮ್ಮೆಯುಣಬೇಕು ಆಡುತ ಮನೆಯೊಳಗಿರಬೇಕು ||ಹುಡುಗರ ಸಂಗಡ ಅಣ್ಣನೂ ನಾನೂ ಇದ್ದೆವೆ, ಅಲ್ಲಾಕೆಯ ಮೊಮ್ಮಗನು |ಗಡಿಗೆಯ ಉರುಳಿಸೆ ನಾ ಕಂಡವರಿಗೆ ಹೇಳಿದೆನೆ ಇಷ್ಟಾ ಯನ್ನನು ಕಾಡುವದದೃಷ್ಟಾ 6ಎದೆಗಳ ಮುಟ್ಟುವದೇಕೋ ಎರಕೊಂಬುವರಲ್ಲಿಗೆ ಪೋಗಿಯಿನ್ನನ್ನಾ |ಹದದಿಂದಲೆ ಯಿರು ಶಿಕ್ಷೆಯ ಮಾಳ್ಪೆ ಎಚ್ಚರಿಕೆಯಿರಲಿ ಕಾಲ್ಪಡಿದರೆ ಬಿಡೆನೋ ಮರಳಿ ||ಮುದದಿಂದಲಿ ಚಂಡೊಗೆಯಲು ಅವಳಾ ಬಚ್ಚಲಿಯೊಳು ಬಿತ್ತು ತಕ್ಕೊಂಡೇ |ಹದ ತಪ್ಪಿದರೀ ಹೆಂಗಸರೆಲ್ಲಾ ಪ್ರಾಣೇಶ ವಿಠಲನಾಣೇ ಸುಳ್ಳಲ್ಲವು ಕಾಣೇ 7
--------------
ಪ್ರಾಣೇಶದಾಸರು