ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರಯ್ಯ ಗುರು ಸ್ವಾಮಿ ಶ್ರೀಸದ್ಗುರು ಎನ್ನ ಮನೋಮಂದಿರಕೆ ಕರುಣಾನಂದದ ಸುಖ ಬೀರುತ ಬಾರೈ ಆತ್ಮಾನುಭವಕೆ ಧ್ರುವ ಕಣ್ಣು ಹಾರುತಿದೆÀ ಬಲದೆನ್ನ ಖೂನದೋರವ್ಹಾಂಗಿಂದು ಚೆನ್ನಾಗ್ಹೊಳಿಯುತಿ ಸುಚಿಹ್ನ ನೀನೊಲಿಯವ್ಹಾಂಗೆ ಬಂದು ಎನ್ನೋಳೀವ್ಹಾಂಗ ಸನಾತನ ಪಾಲಿಸಿದೆನಗೊಂದು ಧನ್ಯಗೈಸುವ ದಯಾಳು ನೀನಹುದೊ ಕೃಪಾಸಿಂಧು 1 ಏನೊಂದರಿಯೆ ಒಂದು ಸಾಧನ ಧ್ಯಾನಮೌನ ಹ್ಯಾಗೆಂದು ಖೂನಬಲ್ಲೆನೊ ನಿಮ್ಮ ಬಿರುದಿನ ದೀನನಾಥ ನೀ ಎಂದು ನ್ಯೂನಾರಿಸದೆನ್ನೊಳಗಿನ ನೀನೆ ಅನಾಥಬಂಧು ಎನಗುಳ್ಳ ಸ್ವಾಮಿ ಸದೋದಿತ ನೀನಹುದೊ ಎಂದೆಂದು 2 ತಾಯಿ ಶಿಶುಸ್ತನಪಾನಕೆ ಬಾಯಿಯೊಳಗಿಡುವ್ಹಾಂಗ ಸಾಯಾಸವಿಲ್ಲದೀಪರಿ ದಯಮಾಡುವದೆನಗೆ ಶ್ರೇಯಸುಖದಾಯಕೊಬ್ಬನು ನೀನೆ ಭಾನುಕೋಟಿ ಎನಗೆ ಅನುದಿನ ದೀನಮಹಿಪತಿಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವನ್ನಾ ಪಾದವ ನಂಬಬಾರದೇ | ಈಶನೊಲಮಿಂದಾ ಸದ್ಗತಿ ಸುಖವು ದೊರದೇ ಪ ವನಜಭವಾದಿಗಳು ದೋರುವೆನಾ ಮುಕುತಿಯು ಪಾಯಾ | ಯನುತ ಬಂದರೆಯುನೊಡದಿರು ಅವರ ಕಡೆಯಾ 1 ಜಠರ ಬಾಗಿಲವಾ ಕಾವಾಶ್ವಾನನ ಪರಿಯಂತೆ | ನಿಷ್ಠೆಯೊಂದನೆ ಬಿಟ್ಟು ತಿರುಗಬ್ಯಾಡ ಕಂಡಂತೆ2 ಇಂದಿಗೆ ನಾಳಿಗೇ ಹ್ಯಾಂಗೆಂದು ಚಿಂತಿಸದಿರು | ಛಂದದಿ ಗೀತೆಯಲಿ ಸಾರಿದ ವಾಕ್ಯಾ ಮರೆಯದಿರು 3 ಶಿಲೆಯೊಳಗಿರುತಿಹಾ ಕಪ್ಪಿಗಾಹಾರ ನೀಡುವರಾರೋ | ತಿಳಿದು ನೀನೀಗ ಹಲವ ಹಂಬಲವ ಹಿಡಿಯದಿರು 4 ಎರಡು ದಿನದಿದು ಸಂಸಾರವೆಂಬುದು ನೋಡಿ | ಅರಿತು ಇದರೋಳಗ ಸಾರ್ಥಕ ಸಾಧನವ ಮಾಡಿ 5 ಒಂದು ಭಾವದಲಿ ತ್ವರಿತದಿ ಹೊಕ್ಕರ ಶರಣವನು | ತಂದೆ ಮಹಿಪತಿ ಸುತ ಸನ್ಮಾರ್ಗ ಕೂಡಿಸುತಿಹನು 6 ಏನೆಂದರಿಯದಾ ಕಂದಗೆ ಉದ್ದರಿಸಿದ ನೋಡೀ | ತಂದೆ ಮಹಿಪತಿಯು ದಾರಿಯ ದೋರಿದ ದಯಮಾಡಿ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು