* ಹ್ಯಾಂಗಿರಲಿನ್ನು ರಂಗನ ಬಿಟ್ಟಿನ್ನಹ್ಯಾಗಿರಲಿಂನು
ಮಂಗಳಾತ್ಮಜ ಹೆಳವನಕಟ್ಟೆರಂಗನ ಬಿಟ್ಟು ಹ್ಯಾಂಗಿರಲಿಂನು ಪ.
ಸಿರಿಮನೋಹಾರಿ ಶರಣರಿಗಂತ:ಕರಣವ ತೋರಿ
ತ್ವರಿತದಿದಿವ್ಯರಥಗಳನ್ನು ನೀಡಿ
ಪರಮಾ ಸಂಭ್ರಮದಿಂದಾಯಿರುವೋನ
ಮರದು ನಾ ಹ್ಯಾಂಗಿರಲಿನ್ನೂ 1
ಗಿರಿಮನಿ ಮಾಡಿ ಶರಣಗರಿತ:ಕರುಣವ ನೀಡಿ
ಸರಸದಿ ಮನೋರಥಗಳ ತೋರಿ
ಪರಮಾ ಸಂಭ್ರಮದಿಂದಾ ಇರುವನ
ಮರದು ನಾ ಹ್ಯಾಂಗಿರಲಿನ್ನೂ 2
ಶರಣು ಪೊಕ್ಕಿರುವಾ ಗಿರಿಯಮ್ಮಗಾ
ತುರದಿ ವಲಿದಿರುವ ಸರಕಿರಿಗೆಜ್ಜೆ
ಧರಿಸಿ ಕುಣಿದಿರುವ ಸಿರಿನಾರಸಿಂಹನ
ಚರಣವಾ ಮರೆದು ನಾ ಹ್ಯಾಂಗಿರಲಿನ್ನೂ 3