ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ
ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು
ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1
ಸಂಚಿತ ಧನವು
ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2
ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು
ಮಾಡಿ ಸಾಧಿಸೊಕೊಂಬುವದು 3
ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು
ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4
ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು
ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5