ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ನೋಡಿದೆ ವೆಂಕಟರಮಣನ | ದ್ವಾರ ವಾಡ ಗ್ರಾಮದಿ ನಿಂತ ದೇವನ ಪ ರೂಢಿಪ ದಾಸರಿಗೆ ನೀಡಲು ದರುಶನ ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ಅ.ಪ ಈತನೆ ವೈಕುಂಟನಾಥನು ನಿಜ | ಶಾತಕುಂಭೋದÀರ ತಾತನು ಮಾತಂಗ ವರದಾತ ಶ್ವೇತವಾಹನ ಸೂತ ಜಾತರಹಿತ ದನುಜಾತ ಕುಲಾಂತಕ 1 ತೋಡ ಜನಕೆ ಸುಖದಾತನ | ಅಂಡಜಾತ ಪ್ರಕಾಂಡ ವರೂಥ ಬ್ರ ಹ್ಮಾಂಡನಾಯಕನಾದ ಪಾಂಡವಪಾಲನ 2 ಇಂದು ಧರಾಮರ ವಂದ್ಯನ ಶಾಮ ಸುಂದರ ವಿಠಲನ ಮುಕುಂದನ ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ ಇಂದು ಬೆಂದು ಪೋದವು ಘನ 3
--------------
ಶಾಮಸುಂದರ ವಿಠಲ