ಧನವಗಳಿಸಬೇಕೆಂಥಾದು | ಈ | ಜನರಿಗೆ ಕಾಣಿಸದಂಥಾದು ಪ
ಹರಿಹರ ಬ್ರಹ್ಮಾದಿಗಳೆಲ್ಲ | ಹೌದಹುದಹುದೆಂಬಂಥಾದು ಅ.ಪ
ಕೊಟ್ಟರೆ ಹತ್ತಿರದಂಥಾದು | ತನ್ನ ಬಿಟ್ಟು ಹೊರ ಹೋಗದಂಥಾದು || ಬಿಚ್ಚಿದ ಗಂಟನು ಬಯಲೊಳಗಿಟ್ಟರೆ | ಮುಟ್ಟಬಾರದಾರಿಂಥಾದು 1
ಕರ್ಮವು ಬಾರದಂಥಾದು | ಜನರೋರ್ವರು ತೋರಿಸದಂಥಾದು | ನಿರ್ಮಲವಾದ ಮನಸಿಗೆ ದಾನ | ಧರ್ಮವ ಮಾಡಿಸುವಂಥಾದು 2
ಮರವನು ತಾರದಂಥಾದು | ನಿಜದರಿವಿನೊಳಗೆ ಇರುವಂಥಾದು |ಗುರು ಭವತಾರಕ ಭಜಕರ ಕಣ್ಣಿಗೆ | ತೊರಹಿಲ್ಲದೆ ತುಂಬಿದಂಥಾದು 3