ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಗನಿಂದೆ ಗತಿಯುಂಟೆ ಜಗದೊಳಗೆನಿಗಮಾರ್ಥ ತತ್ತ್ವವಿಚಾರದಿಂದಲ್ಲದೆ ? ಪ ತ್ರಿಗುಣರಹಿತ ಪರಮಾತ್ಮನ ಧ್ಯಾನದಿಹಗಲಿರುಳು ನಿತ್ಯಾನಂದದಿಂದತೆಗೆದು ಪ್ರಪಂಚವಾಸನೆಯ ಬಿಟ್ಟವರಿಗೆಮಗನಿದ್ದರೇನು ಇಲ್ಲದಿದ್ದರೇನು ?1 ಶೋಣಿತ ಶುಕ್ಲದಿಮಿಳಿತವಾದ ಪಿಂಡ ತನ್ನ ಪೂರ್ವಕರ್ಮದಿಂದನೆಲಕೆ ಬೀಳಲು ಅದು ಸಲಹಿ ರಕ್ಷಿಪುದೆ ? 2 ಪರಮ ದುಷ್ಟನಾಗಿ ಮರೆತು ಸ್ವಧರ್ಮವಗುರು ಹಿರಿಯರ ಸಾಧುಗಳ ನಿಂದಿಸಿಬೆರೆದನ್ಯ ಜಾತಿಯ ಪರನಾರಿಯ ಕೂಡಿಸುರೆ ಕುಡಿದು ಜೂಜಾಡಿ ನರಕಕ್ಕೆ ಬೀಳುವ 3 ಸತ್ಯನೊಬ್ಬ ಮಗ ಶಾಂತನೊಬ್ಬ ಮಗ ದು-ರ್ವೃತ್ತಿ ನಿಗ್ರಹನೊಬ್ಬ ಸಮಚಿತ್ತನೊಬ್ಬನುಉತ್ತಮರೀ ನಾಲ್ಕು ಮಕ್ಕಳಿದ್ದ ಮೇಲೆಹೆತ್ತರೇನು ಇನ್ನು ಹೆರದಿದ್ದರೇನಯ್ಯ ? 4 ಸುತರಿಲ್ಲದವಗೆ ಸದ್ಗತಿ ಇಲ್ಲವೆಂತೆಂಬಕೃತಕ ಶಾಸ್ತ್ರವು ಲೌಕಿಕಭಾವಕೆಕ್ಷಿತಿಯೊಳು ಕಾಗಿನೆಲೆಯಾದಿಕೇಶವ ಜಗ-ತ್ಪತಿಯ ಭಜಿಪಗೆ ಸದ್ಗತಿಯಿರದೆ ಹೋಹುದೆ ? 5
--------------
ಕನಕದಾಸ
ಯಾಕೆ ಮೈಮರೆದೆ ನೀನು ಪ. ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ. ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ 1 ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ 2 ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ 3 ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ 4 ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ 5
--------------
ವಾದಿರಾಜ
ದೇಹವೇಕೆ ನಮಗೆ ದೇಹ - ದೇಹ ಸಂಬಂಧಗಳೇಕೆ |ಆಹುದೇನೊ ಹೋಹುದೆನೊ ಇದರಿಂದ ಹರಿಯೆ ಪ.ಮೆಚ್ಚಿ ಕಟ್ಟಿದ ಚೆಲುವ ಮಾಳಿಗೆ ಮನೆ ಏಕೆ |ಮುಚ್ಚಿ ಹೂಳಿದ ಹೊನ್ನು ಹಣವೇತಕೆ |ಪಚ್ಚೆ ಮಾಣಿಕವಜ್ರ ವೈಡೂರ್ಯವೇತಕೆ |ಅಚ್ಯುತನ ದಾಸರಲಿ ಭಕ್ತಿ ಇಲ್ಲದ ಬಳಿಕ 1ಹೆಂಡಿರು ಮಕ್ಕಳು ಏಕೆ - ಹಣ ಹೊನ್ನು ಎನಲೇಕೆ |ಕಂಡ ವೇದ ಶಾಸ್ತ್ರಗಳನೋದಲೇಕೆ - ಭೂ ||ಮಂಡಲಾಧಿಪತ್ಯವೇಕೆ - ಮೇಲೆ ಸೌಂದರ್ಯವೇಕೆ |ಪುಂಡರೀಕಾಕ್ಷನ ದಾಸನಲಿ ಭಕ್ತಿಯಿಲ್ಲದ ಬಳಿಕ 2ಮಂದಾಕಿನಿ ಮೊದಲಾದ ತೀರ್ಥಯಾತ್ರೆಗಳೇಕೆ |ಚೆಂದುಳ್ಳ ವಿಹಿತ ಕರ್ಮಗಳೇತಕೆ |ಇಂದಿರೇಶ ನಮ್ಮ ಪುರಂದರವಿಠಲನ |ಪೊಂದಿ ಭಜಿಸಿದವನ ಇಂದ್ರಿಯಂಗಳೇಕೆ 3
--------------
ಪುರಂದರದಾಸರು
ಮಡಿ ಮಡಿದ ಮಡಿಯೆಂದು ಮುಮ್ಮಾರು ಹಾರುತಿ |ಮಡಿಯೆಲ್ಲಿ ಬಂದಿತೊ ಬಿಕನಾಶಿ ಪ.ಮಡಿಯು ನೀನೆ - ಮೈಲಿಗೆ ನೀನೆ - |ಸುಡಲಿ ನಿನ್ನ ಮಡಿ ಬಿಕನಾಶಿ ಅಪಎಲವು - ಚರ್ಮ - ಮಲ - ಮೂತ್ರ ಗುಂಡಿಯಲಿ |ನಲಿಯುತ ನಿಂತೆಯಾ ಬಿಕನಾಶಿ ||ನೆಲೆಗೊಂಡ ನವದ್ವಾರದ ಹೊಲೆಯೊಳು |ಅಳಲುತ ನೀ ಬಿದ್ದೆ ಬಿಕನಾಶಿ 1ಹುಟ್ಟಲುಸೂತಕ ಸಾಯಲುಸೂತಕ |ನಟ್ಟುನಡುವೆ ಬಂತೆ ಬಿಕನಾಶಿ ||ಬಿಟ್ಟು ಬಿಡದೆ ಕಾವೇರಿಯ ಮುಳುಗಲು |ಮುಟ್ಟು ಹೋಹುದೆ ಬಿಕನಾಶಿ 2ಚರ್ಮವು ತೊಳದರೆ ಕರ್ಮವು ಹೋಹುದೆ |ಮರ್ಮವ ತಿಳಿಯದೆ ಬಿಕನಾಶಿ ||ಬೊಮ್ಮನಯ್ಯ ಪುರಂದರವಿಠಲನ ಪಾಡಿ |ನಿರ್ಮಲದಿ ಬಾಳೆಲೊ ಬಿಕನಾಶಿ 3
--------------
ಪುರಂದರದಾಸರು