ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಕಮಲ ತಡೆಯುವುದೆ ಕಟುಖಾರವಾ ನಿತ್ಯ ಪೂಜಿಸುವ ಕೋಮಲದಾ ಪ. ಪರಿವಾರ ಜನವು ಭೋಜನಕೆ ಕುಳಿತಿರಲು ನರ ಹರಿಗೆ ಅರ್ಪಿತದ ಹುಳಿಯಲ್ಲಿ ಕರವಿಟ್ಟು ಪರಿಪಕ್ವ ಶಾಖದ ಹೋಳುಗಳ ಬಡಿಸಲು ಕರ ಕರೆಗೆ ಸಿಲುಕೇ 1 ಮಧ್ವದುಗ್ಧಾಭ್ಧಿಯಲಿ ಜನಿಸಿದ ಸುಧಾರಸವ ಶುದ್ಧ ದೃಷ್ಟಿಯಲ್ಲೀ ಸವಿಸವಿದು ಮಧುರಾ ಹೃದ್ವಜದಲಿ ತುಂಬಲನುವಾದ ಪುಸ್ತಕವ ಮುದ್ದಾಗಿ ಪಿಡಿಯಲನುಕೂಲವಾಗಿ ಇಂಥ 2 ಗಂಧ ಕುಸುಮಾಕ್ಷತೆಗಳಿಂದ ಶ್ರೀ ತುಳಸಿದಳ ದಿಂದ ವಿಠ್ಠಲ ಕೃಷ್ಣ ಲಕ್ಷ್ಮಿನರಹರಿಯಾ ವೃಂದ ಸಾಲಿಗ್ರಾಮ ಹನುಮ ಯತಿಕುಲಜರುಗ ಳಿಂದ ಸಹಿತದಿ ಪೂಜೆ ವಿಭವದಲಿ ಗೈದಾ 3 ಮಧುರಾನ್ನ ಸವಿದು ಮಧುಸೂದನನ ಗುಣಗಳನು ವಿಧವಿಧದಿ ಮಧ್ವಗ್ರಂಥದಿ ಕಂಡು ನಲಿದೂ ಹೃದಯ ನಿರ್ಮಲದಿ ಆಲಿಸುವ ಭಕ್ತರಿಗೆ ಮಧುರ ರಸಮನದ ಎಡೆಯಲ್ಲಿ ಬಿಡಿಸುವ ಇಂಥ 4 ಗೋಪಾಲಕೃಷ್ಣವಿಠ್ಠಲನ ಭಕ್ತರು ಬಂದು ಶ್ರೀಪಾದಕೆರಗೆ ಸಿರದಲ್ಲಿ ಅಕ್ಷತೆಯಾ ಅಪಾರ ಕರುಣದಿಂದಲಿ ಸೂಸಿ ನಲಿಯುತಲಿ ಅಪತ್ತು ಕಳೆವ ಶ್ರೀ ಪ್ರದ್ನುಮ್ನತೀರ್ಥಯತಿ 5
--------------
ಅಂಬಾಬಾಯಿ
ಮಂದಿಯಗೊಡವೆ ಇನ್ನೇನು ಮಗಳೆ |ಮುಂದೆ ನೋಡಿ ಹಂಜಿ ನೂಲವ್ವ............ ಪ.ಕಣ್ಣ ಮುಂದಿನ ಕಸವನು ತೆಗೆದು |ಸಣ್ಣಗೆ ನೀ ನೂಲವ್ವ............... ಅಪವಸುಧೆಯ ದೊಡ್ಡ ಮಣೆಯಮಾಡಿ |ಶಶಿರವಿಗಳೆರಡು ಕಂಬವ ಹೂಡಿ ||ಆ ಸಿರಿರಂಗರ ಎರಡು ಚಕ್ರವ ಮಾಡಿ |ದರ್ಶನವೆಂಬುವ ನುಲಿಯನು ಬಿಗಿದು 1ಪರಬ್ರಹ್ಮನಅಳವು ಮಾಡಿ |ಕುರುಡು ನಾಶಿಕ ಬೆನಕದಿ ತಿಕ್ಕಿ ||ಹರಿ ನೀನೆ ಎಂಬ ದಾರವಕಟ್ಟಿ |ವಿರತಿವಿಚಾರದ ಬೆಲ್ಲಗಳಿಕ್ಕಿ2ಜಾÕನವೆಂಬುವ ಕದರನ್ನಿಕ್ಕಿ |ಮಾನಮದವೆಂಬ ಹಂಜಿಯ ಹಿಡಿದು ||ಧ್ಯಾನವೆಂಬ ಎಳೆಯನು ತೆಗೆದು |ಮೌನದಿಂದಲಿ ನೂಲವ್ವ 3ಕಕ್ಕುಲಾತಿ ಕಾಂಕ್ಷೆಗಳೆಂಬ |ಸಿಕ್ಕುದೊಡಕುಗಳನೆ ಬಿಡಿಸಿ ||ಒಕ್ಕುಡಿತೆಯ ಮಾಡಿದ ಮನದಿ |ಕುಕ್ಕಡಿನೂಲು ಕೂಡಿ ಹಾಕಮ್ಮ 4ಇಪ್ಪತ್ತೊಂದು ಸಾವಿರದ ಮೇ -ಲಿಪ್ಪ ನೂರು ಎಳೆಯನು ಹೊಡೆದು ||ತಪ್ಪದೆ ಹುಂಜವಕಟ್ಟಿ ನೀನು |ಒಪ್ಪದಿ ಸೀಳು ಇಳುವಮ್ಮ 5ಸದ್ಯದಿ ನೀ ಜಾಡರಲ್ಲಿ |ಸಿದ್ಧಬದ್ಧ ಸೀಳುಗಳ ಹಾಕಿ ||ವಿದ್ಯೆಯೆಂಬುವ ಹಚ್ಚಡವನ್ನು |ಬುದ್ಧಿಯಿಂದಲಿ ನೇಯಿಸಮ್ಮ 6ಒಪ್ಪುವಾತ್ಮ ಪರಮಾತ್ಮನೆಂಬ |ಒಪ್ಪ ಎರಡು ಹೋಳುಗಳಹಚ್ಚಿ ||ತಪ್ಪದೆ ಪುರಂದರವಿಠಲನ ಪಾದಕೆ |ಒಪ್ಪಿಸಿ ಕಾಲವ ಕಳೆಯಮ್ಮ 7
--------------
ಪುರಂದರದಾಸರು