ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ಎನ್ನಿರೊ ತ್ರೈಲೋಕ್ಯದೊಡಿಯಗೆ ತ್ರಾಹಿ ತ್ರಾಹಿ ಎನ್ನಿರೊ ತಾರಕ ಬ್ರಹ್ಮಗೆ ಧ್ರುವ ಕಾಮ ಕ್ರೋಧ ಸುಟ್ಟು ಹೋಳಿಯಾಡುವ ಬನ್ನಿರೊ ಪ್ರೇಮ ಪ್ರೀತಿಯಿಂದ ಕುಣಿದಾಡುವ ಬನ್ನಿರೊ 1 ಭೇದವಳಿದು ಸಾಧು ಜನರ ಕೂಡಿಕೊಂಬ ಬನ್ನಿರೊ ಮದ ಮತ್ಸರವ ಬೂದಿ ಮಾಡಿಚೆಲ್ಲುವ ಬನ್ನಿರೊ 2 ಏಕರಂಗವಾಗಿ ಓಕುಳ್ಯಾಡವ ಬನ್ನಿರೊ ಜೀಕಳಿಯ ಮಾಡಿ ಮಾಯ ಮೋಹ ಎಸುವ ಬನ್ನಿರೊ 3 ಎಲ್ಲರೊಳಗಿಹ ನಮ್ಮ ಪುಲ್ಲನಾಭ ಚಲುವನೊ ಬಲ್ಲ ಮಹಿಮನಿಗೆ ನೆಲೆಯ ನೋಡಿ ಒಲಿವನೊ 4 ಹೋಳಿಯಾಡಿದನು ನೋಡಿ ಇಳಿಯೊಳಗ ಮಹಿಪತಿಯು ಕಳೆದು ಕಲ್ಪನೆ ಕೋಟಿಲಿಂದ ಗೆದ್ದ ನೋಡಿರೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು