ವ್ಯಗ್ರಬುದ್ಧಿಯು ನಿನಗೆ ಶ್ರೀಹರಿಯೆ
ಸುಗ್ರಾಸನವು ನನಗೆ ಅಗ್ರದೈವರು ನೀನೇ ಗತಿಯೊ
ಉಗ್ರತಪದಲಿ ಭಜಿಸುವಾತ್ಮಗೆ
ಉಗ್ರರೂಪವ ತೋರಿ ವಿಧವಿಧಾ-
ನುಗ್ರಹಿಪೆ ಅಮೃತಾನ್ನ ಭೋಜನ ಪ
ಜನಿಸಲಮೃತ WಟÀವು ಸಿಂಧುವಿನೊಳು
ವನಜನಾಭನೆ ವಂಚಿಸಿ ದನುಜ ಕಣಕದು ಇಲ್ಲದಾಗಿ
ಅನುಮಿಷರಿಗತ್ಯಂತಮಿಕ್ಕೆ
ಘನಹರುಷ ತೋರಿದೆಯು ಸುರರಿಗೆ
ನಿನಗೆ ಮೆಲ್ಲಲು ಇರಿಸಲಿಲ್ಲಾ 1
ಧೀರ ದೂರ್ವಾಸ ಮುನಿ ಶಿಷ್ಯರ್ವೆರಸಿ
ಹೋರಿದಾಹಾರಕ್ಕಾಗಿ ನೀರಜಾಕ್ಷಿಯು
ಘೋರ ಬಂತೆಂದಾ ರಾತ್ರಿಯಲಿ ನೆನೆಯೆ ನಿನ್ನನು
ಆ ರಭಸದೊಳು ಬಹುನಿಮಿಷÀದಿ
ಸೂರಿ ಮಾಡ್ದೆಯೋ ಇಷ್ಟು ಭೋಜನಾ 2
ಸಖ ಸುದಾಮನು ಕಾಣಲು ಶ್ರೀಹರಿಯೆ
ಭಕುತಿ ನೋಡಿ ಮೆಚ್ಚಿದಿ
ಮುಕುತಿದಾಯಕ ಪರಮ ಪುರುಷನೆ
ಭಕುತಿ ಭೋಜನವಿತ್ತೆನಗೆ ಸದಾ
ಪ್ರಕಟ ನರಸಿಂಹವಿಠಲನೆ ಬಲು
ನಿಕಟಮನ ಕೊಡು ನಿನ್ನ ಭಜಿಸುವಾ 3