ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯಧಿಕ ಹರನಧಿಕ ಎಂದು ಹೋರಾಡದಿರಿ |ಹರಿಹರರ ಭಕ್ತರೇ ಸಾಕ್ಷಿ ಲೋಕದೊಳು ಪ.ಹರಿಯೆಂದು ಪ್ರಹ್ಲಾದ ಬಂದ ದುರಿತವ ಗೆಲಿದ |ಹರನೆಂದು ಅವನ ಪಿತ ತಾನೆ ಅಳಿದ ||ಹರಿಯೆಂದ ವಿಭೀಷಣನು ಸ್ಥಿರಪಟ್ಟವೈದಿದ |ಹರನೆಂದ ರಾವಣನು ಹತನಾದನಯ್ಯ 1ಹರಿಯೆಂದು ಭೀಮ ಪರಿಪೂರ್ಣಕಾಮನು ಆದ |ಹರನೆಂದ ಆ ಜರಾಸಂಧ ಹತನಾದ ||ಹರಿಯು ಬಾಗಿಲ ಕಾಯ್ದ ಬಲ ಭಾಗ್ಯವಂತನಾದ |ಹರನು ಬಾಗಿಲ ಕಾಯ್ದ ಬಾಣನಳಿದ 2ಹರನ ವರವನು ಪಡೆದ ಭಸ್ಮಾಸುರನು ಅವನ |ಶಿರದಲ್ಲಿ ತನ್ನ ಕರವಿಡಲು ಬರಲು ||ಹರಿ ನೀನೆ ಗತಿಯೆಂದು ತ್ರಿಪುರಾರಿ ಮೊರೆಯಿಡಲು |ವರದ ಪುರಂದರವಿಠಲ ಕಾಯ್ದುದರಿಯ ? 3
--------------
ಪುರಂದರದಾಸರು