ಕಥನಾತ್ಮಕ
ಅರಸಿಕೊಂಬೆ ಮನಸ್ಸಿಗೆ ಬಂದವಳ ಪ
ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು |
ಕೊಂಡು ಮಾತಾಡಿ ಬೇಡಿದ 1
ನಾರಿಯರು ನಿನಗೆ ಉಂಟಾಗ ಈರೈದು ಸಾವಿರ
ಪರಾಕು 2
ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ |
ಸತಿ ವೇಗ ಪೋಗು ನೀ ಸಾಗು 3
ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ |
ಒಂದೊಂದು ಮನೆಯಲಿ ಸೋಜಿಗ ಅತಿಶಯ |
ಅಂದು ನಾರದಗೆ ತಾ ತೋರಿದ ಬಿರುದಾ 4
ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ |
ಪರಿಯಂತ ಏಕಾಂತ 5
ಚದುರಂಗ ನಗೆಕೂಟ ಒಂದು ಮನೆ |
ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ |
ಬಿಗಿದಪ್ಪಿ ಸವಿನಾಡುವ ನೋಡಾ6
ಹೋಯಿದಾಟ ಒಂದು ಮನೆ |
ಮನ್ಯರಾದ ಶುದ್ಧಿ ಮಕ್ಕಳ ಶೋಭನಾ |
ಪಯಣಗತಿಯಲಿದ್ದ ವಾರ್ತಿ ಒಂದರ್ಥಿ7
ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ |
ಕರಕೊಂಡು ಕುಡಿಯುತಾ |
ಕುಸುಮವ ಮುಡಿಸುತ ನುಡಿಸುತಾ8
ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ |
ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ |
ದಾನ ಧರ್ಮಗಳ ಕೊಡುವನು ನಡೆವನು 9
ಮಿಂದುಂಡು ಒಂದು ಮನೆ |
ಅನಂತ ಇದ್ದಾ ಅನಿರುದ್ಧಾ10
ಬಂದು ಹರಿಯ | ಚರಣಕ್ಕೆ ಬಿದ್ದು |
ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ 11