ರಾಮಾ ಕೃಷ್ಣಾ ಗೋವಿಂದಾ ಗೋಪಾಲ ಕೇಶವಾ |
ಭವ ಪಾಶವಾ ಪ
ಅಹಂಮಮತಾವೆಂಬಾ ಸಂಚಾರ ವಾಯಿತು |
ಸೋಹಂವೆಂಬಾ ತಿಳಿವಾದೆಚ್ಚರ ಹೋಯಿತ್ತು |
ನಾಹಂಕರ್ತಾನೆಂದು ಸುವಿಚಾರ ಸೇರಿದಾ |
ಸೋಹಂ ಎಂದು ನುಡಿಯದಾ ಕುಮತಿ ಮೀರಿದಾ 1
ಅನಾತ್ಮದಲ್ಲಿ ಆತ್ಮ ಭಾವನೆ ಮೂಡಿದೇ |
ಸನಾತನ ಚೈತನ್ಯ ತಾನೆಂದು ನೋಡದೆಲ |
ಮನದಿಂದ ಈ ಕ್ಷಣ ತ್ರಯವಕೂಡಿದೇ |
ಕನಸಿನಂದದಿ ಸಂಸಾರ ದೊಳಾಡಿದೇ2
ಮರಹು ಬಿಡಿಸಿ ನಿನ್ನೆಚ್ಚರ ದೋರಿಸೀ |
ಚರಣದ ಭಜನೆಗೆ ಕಣ್ಣ ದೆರೆಸೀ |
ಗುರುಮಹಿಪತಿ ಪ್ರಭು ದಯಬೀರಿಸೀ |
ಹೊರೆವದೆನ್ನಯ ಅಪರಾಧ ಕ್ಷಮಿಸಿ 3