ಒಟ್ಟು 11 ಕಡೆಗಳಲ್ಲಿ , 7 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರು ಹಿರಿಯರ ಸೇವಿಸಿಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿಕೊಳ್ಳಿರೊ ಪ ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದೆರಕ್ಕಸಾರಿಯ ಭಕ್ತರೊಳು ಸೇರಿ ನೀವು ಸೆರೆಯಿಕ್ಕದಂಥವನ ಮೊರೆ ಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆಲ್ಲತುಂಬಿರುವ ಸುಖವೆಲ್ಲ ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವನುಂಬ ಭ್ರಮರಕೆ ಸರಿಗಾಣೆನೊ 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಬಿಕ್ಕುಗಳು ಬಂದು ಬೈವಾಗಇಕ್ಕಿ ಪೊರೆವುದಕೆ ಗತಿಯಿಲ್ಲದಾ ದರಿದ್ರರಿಗೆಸೌಖ್ಯವೆತ್ತಣದೊ ಮನುಜರಿಗೆ 3 ತಾಯ ಮಾರಿ ತೊತ್ತನು ಕೊಂಬ ಪಾಮರರಂತೆಹೇಯ ಕುಜನರಾ ಚರಣಕೆರಗಿಮಾಯಾಪತಿಯಂಘ್ರಿಗಳ ನೆನೆಯಲೊಲ್ಲದ ನರನಆಯುಷ್ಯ ಬರಿದೆ ಹೋಯಿತಲ್ಲ 4 ಅಯಿವರಿತ್ತೊಡವೆಯ ಅವರವರೊಯ್ಯುವರು ಮ-ತ್ತಯಿವರೆಂಬುವರು ತೊಲಗುವರುಮೈಯ ನೆತ್ತರು ಕೂಡ ಹರಿದು ಹೋಹುದು ನಿಮ್ಮಕೈಯ ಪಿಡಿದೆತ್ತುವರ ನಾನು ಕಾಣೆ 5 ಬಲಗುಂದಿ ನೆಲ ಹಿಡಿಯೆ ರೋಗರುಜಿನಗಳೆಂಬಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖ ಗಂಟಲೊಳಗಣನಾಲಗೆಯ ನಾದ ಎಲ್ಲಿಹುದೊ 6 ಆಗಲೇ ಹರಿನಾಮ ನಾದದಿಂದೆಚ್ಚತ್ತುನಾಗಶಯನನ ಪುರದ ಪಥವಆಗಮಜ್ಞರ ಕೇಳಿ ತಿಳಿದುಕೊಳ್ಳಿರೊ ನಿಮಗೆಈ ಗಾಳಿ ದೀಪ ಸ್ಥಿರವಲ್ಲ 7 ಜರೆಯೆಂದು ಕಡೆಯಲ್ಲಿ ಗೊರಗೊರನೆ ಉಸಿರಾಡೆಶರೀರದ ಸಂಬಂಧಗಳಕಟಾತರುಣಿಯರ ಮ್ಯಾಲಾಸೆ ತಮ್ಮ ಹಿತವನರಿಯದೆಬರಿದೆ ಭವದಲ್ಲಿ ಬಳಲುವಿರಿ 8 ಸರಕು ಇಲ್ಲಮಾಧವನ ಪೂಜೆ ಒಮ್ಮೆಯೂ ಮಾಡಿಲ್ಲ ಹರಿಪಾದ ತೀರ್ಥದಾ ವ್ರತಗಳಿಲ್ಲ 9 ಊಧ್ರ್ವಪುಂಡ್ರಗಳಿಲ್ಲ ಹರಿಯ ಲಾಂಛನವಿಲ್ಲಪದ್ಮ ತುಳಸಿಯಾ ಸರಗಳಿಲ್ಲಸದ್ಧರ್ಮ ಪಥವೆತ್ತ ವಿಷಯಾಂಧ ಕೂಪದೊಳುಬಿದ್ದು ಪೊರಳುವ ಮರುಳಿದೆತ್ತ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕ ವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ11 ಸಕ್ತಿಯಿಂ ಹರಿಯ ಪೊಗಳಿ ಅಡಿಯಲುರುಳಿ ಶುಷ್ಕಭುಕ್ತಿಗಳ ಮೇಲುಗುಳಿ ದೂರ ನಿಲ್ಲಿಭಕ್ತಿ ಜ್ಞಾನಗಳಿರಲಿ ಮತ್ರ್ಯ ಪಥದಿಂ ಮರಳಿಮುಕ್ತಿ ಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆ ಕೆಡಹುವ ಮುನ್ನಕಳ್ಳರೈವರ ಕಾರಣದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭನ ಅಡಿಗೆ ಮೊರೆ ಹೋಗಿರೊ13 ಪಾದ ಸೇರಿರೋ 14 ಒಂಬತ್ತು ರಂಧ್ರಗಳ ತನುವೆಂಬ ಮನೆಯಲ್ಲಿತುಂಬಿರುವ ವಾಯು ಸ್ಥಿರವಲ್ಲನಂಬಿದರ ಪೊರೆವ ನೆಲೆಯಾದಿಕೇಶವನ ಪಾದಾಂಬುಜವನು ಸೇರಿ ಬದುಕಿರೊ 15
--------------
ಕನಕದಾಸ
ಗುರುಹಿರಿಯರನುಸರಿಸಿ ಹÀರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ. ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ 1 ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು 2 ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ 3 ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ 4 ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ 5 ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ 6 ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ7 ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ 8 ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ 9 ಊಧ್ರ್ವಪುಂಢ್ರsÀಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ 10 ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ 11 ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ 12 ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ 13 ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ14 ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ 15
--------------
ವಾದಿರಾಜ
ನೀರೇ ನೀಕರೆ ತಾರೇ ಪ್ರಾಣದೊಲ್ಲಭನಾ|ಜಾಣ ಸುಜ್ಷಾನೇ ಪ ಹೃದಯ ಮಂದಿರದೊಳು ಅರುಹುದೀಪವಹಚ್ಚಿ| ಹಾಡಿ ನೋಡಲಿಹೆ ಮೈದೋರನ್ಯಾಕ|ಮೈದೋರ ನ್ಯಾಕ 1 ಧ್ಯಾಸಮಂಚದಿ ಭಕುತಿ ಹಾಸಿಕೆಯು ಸು| ವಾಸನೆಪುಣ್ಯಕ ವಲಿದು ಬಾರನೇ|ವಲಿದು ಬಾರನೇ 2 ಸಕಲ ನುಕೂಲಿರಲು ಕ್ರೀಡೆಗೆ ಇನಿಯನು ಪುಕಟ ದೊಲಿಯಭಾಗ್ಯ ಮಂದಳು ಕಾಣೇ|ಮಂದಳು ಕಾಣೇ 3 ಅರಿದವಳು ಎಂದು ಅರಿತು ಕೈಯ್ಯವಿಡಿದು| ಮರಳೆನ್ನ ಅಂತ ನೊಡುವರೇನೇ ನೋಡುವರೇನೇ 4 ಧರೆಯೊಳು ಭೋಗಪದಾರ್ಥಿವು ಸರ್ಪದ| ಸರಸದ ಓಲಾಯಿತು ಅಗಲಿರಲಾರೇ|ಅಗಲಿರಲಾರೇ 5 ಬಂದರೊಂದಿನ ನಿಶೆದಲಿ ಕಳೆಗೂಡದೇ| ಒಂದು ಜಾವ ವ್ಯರ್ಥಿಹೋಯಿತಲ್ಲಮ್ಮಾ|ಹೋಯಿತಲ್ಲಮ್ಮಾ 6 ಗುರುವರ ಮಹಿಪತಿ ನಂದನ ಪ್ರಭುವಿನ| ಚರಣವಗಾಣದೇ ಜೀವಿಸಲಾರೆ|ಜೀವಿಸಲಾರೆ 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನ್ಯಾಯ ವೇನೋ ಕೃಷ್ಣಯ್ಯ _ ನ್ಯಾಯವೇನೋ ಪ ಜೀಯ ನಿನ್ನ ಸ್ಮರಣೆ ಕೊಡದೆ ಎರಡು ಭ್ರಷ್ಟ ಮಾಡಿಸೊದು ಅ.ಪ. ಇತ್ತಲಿಲ್ಲ ಅತ್ತಲಿಲ್ಲ ಅರ್ಥಮಾನ ಹೋಯಿತಲ್ಲಾ ಕಾಲ ಕಳೆಸಿ ಸುತ್ತಿ ಸುತ್ತಿ ಚರಿಸೋದು 1 ಹೊಟ್ಟೆಬಟ್ಟೆಗಾಗಿ ಹೊಗಿ ಕೆಟ್ಟ ಜನರ ಸೇವೆ ಮಾಡಿ ಕಾಯ ಭ್ರಷ್ಟನಾಗಿ ಮಾಡೋದೆನ್ನ 2 ಮಾಯಪಾಶದಲ್ಲಿ ಹಾಕಿ ಹೇಯ ವಿಷಯ ಆಶೆಕೊಟ್ಟು ನ್ಯಾಯ ಮಾರ್ಗ ತೋರದೇನೆ ನೋಯಿಸೋದು ಎನ್ನನೀನು 3 ಮೋಸಮಾಡಿ ಪರರಗಂಟು ಆಶೆಯಿಂದ ಕೂಡಿಹಾಕಿ ಘಾಸಿಭವದಲಿ ನೂಕಿ ಕ್ಲೇಶಪಡಿಸುವುದು ಎನ್ನ 4 ಇಂದು ಎಂದು ಹೇಳಿ ಮಂದನಾಗಿ ಕಾಲಕಳೆಸಿ ಪಾದ ದ್ವಂದ್ವ ಧ್ಯಾನ ಮರೆಸೋದು 5 ಮಧ್ವಮತದಲ್ಲಿ ಪುಟ್ಟಿ ಮಧ್ವಗ್ರಂಥ ಓದದೇನೆ ಶುದ್ಧಮೂಢನಾಗಿ ತಿರುಗಿ ಗದ್ದನೆನಿಸುವುದು ಎನ್ನ6 ಇನ್ನು ಮುನ್ನು ನೀನೆ ಗತಿ ಎನ್ನ ಕೈ ಪಿಡಿಯೊ ಬೇಗ ಘನ್ನ ನವನೀತಧರ ಚೆನ್ನ ಶ್ರೀ ತಾಂಡವ ಕೃಷ್ಣವಿಠಲ 7
--------------
ಕೃಷ್ಣವಿಠಲದಾಸರು
ಬಂದು ಬಾರದಾಯಿತು ನೋಡಿ | ಇಂದು ನರದೇಹ ಸಂಗವ ಮಾಡಿ ಪ ಮುತ್ತಿನಂಥಾ ಜನುಮದಿ ಬಂದು | ಚಿತ್ತ ಬೆರಿಯನು ವಿಷಯದಲಿಂದು 1 ಸಾಧು ಸಂತರ ಮೊರೆ ಹೋಗಲಿಲ್ಲಾ | ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ 2 ಆಹಾರ ನಿದ್ರೆ ಭಯ ರತಿಸಂದಾ | ಅಹರ್ನಿಶಿಯಲಿದೇ ಮನದಂಗಾ 3 ನಾನಾ ಶಾಸ್ತ್ರದ ಮಾರ್ಗಕ ಹೋದೀ | ಗಾಣದೆತ್ತಿನಂದದಿ ಕುರುಡಾದಿ 4 ತಂದೆ ಮಹಿಪತಿ ಸ್ವಾಮಿಯ ನೆನೆದು | ಬಂದದ್ದು ಸಾರ್ಥಕ ಮಾಡದೆ ಬೆರೆದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ಥವಾದೆನಲ್ಲ ನರಜನ್ಮದಿ ಜನಿಸಿ ನಾವ್ಯರ್ಥವಾದೆನಲ್ಲ ಪುರುಷೋತ್ತಮಾಚ್ಯುತ ನಂಘ್ರಿಯ ನೆನೆಯದೆ ಪ ಕೂಳಿನ ಬಲದಿಂದ ಬೆಳೆದಿಹ ಕಾಯದ ಮದದಿಂದ ಸಡಗರದಲಿ ದಿನಗಳೆದು 1 ಪರಗತಿಯನು ಕೊಡುವ ಮುರಾರಿಯ ಭಜಿಸದೆ 2 ಪುಣ್ಯ ಕ್ಷೇತ್ರಗಳ ನಾಮೆಟ್ಟಿದೆ ಮೀಯದೆ ತೀರ್ಥಗಳ ಪುರುಷರಸಂಗವ ಮಾಡದೆ 3 ಹರಿಶರಣರ ನಾ ನೋಡಿ ಎರಗದೆ ತುಚ್ಛತನವನೇ ಮಾಡಿ ಪೊಂದದೆ ಶ್ರೀಹರಿಯನರ್ಚಿಸದೆ 4 ಒಂದಿನ ಸುಖವಿಲ್ಲ ಕಾಲವು ಸಂದು ಹೋಯಿತಲ್ಲ ಕೋಣೆ ಇಂದಿರರಮಣ ಮುಕುಂದಮುರಾರೇ 5
--------------
ಕವಿ ಪರಮದೇವದಾಸರು
ನೀನಲ್ಲದೆನಗಾರಿಲ್ಲ ಗೋವಿಂದನೀನಲ್ಲದೆ ಇಹಪರವಿಲ್ಲ ಪಪರರ ಬೇಡಿ ಪಂಥವಾಡಿ ಹೋಯಿತಲ್ಲನರರ ಕೊಂಡಾಡಿ ನಾಲಗೆ ಬರಡಾಯಿತಲ್ಲ ||ಪರವಿಲ್ಲ ಇಹವಿಲ್ಲ ನರಜನ್ಮ ಸ್ಥಿರವಲ್ಲನರಗೆ ಪಾಮರಗೆ ಪಾತಕದ ಪಂಜರಗೆ 1ತನುವು ತನ್ನದಲ್ಲ ತನ್ನವರು ತನಗಿಲ್ಲಧನಧಾನ್ಯ ಸಂಪತ್ತು ಅವಗಿರದು ||ತನುವು ಹೋಗಿ ಇನ್ನು ಮಣ್ಣು ಕೂಡುವಾಗತನುಮನಕ್ಕೆ - ಇನ್ನಾರಯ್ಯ ಸ್ವಾಮಿ 2ಮಾತಾಪಿತರು ಗೋತ್ರಜರು ಮೊದಲಾಗಿಪ್ರೀತಿಯಿಂದ ಬಹಳ ಸತಿಸುತರು ||ಕೀರ್ತಿಗೆ ಅವರು ಸ್ವಾರ್ಥಕೆ ಇವರು ಸಂಗಾತಿಗಿನ್ನಾರಯ್ಯಪುರಂದರವಿಠಲ3
--------------
ಪುರಂದರದಾಸರು
ಹರಿಶರಣು ಮಧ್ವಗುರು ಶರಣೆಂಬೋದೆ ಬೀಜ ಮಂತ್ರ ಇಹಪರಕಿದೆ ಸಾಧನವೆಂದು ನಂಬಿಬಿಟ್ಟೆ ಹಲವು ತಂತ್ರ ಪ.ಹರಿಕೊಡದಾರು ಕೊಡುವರಿಲ್ಲ ನರರನು ಬೇಡಲ್ಯಾಕೆ ಶ್ರೀಹರಿಕೊಟ್ಟರುಂಟು ಹಗಲಿರುಳು ಒಣಹಂಬಲ್ಯಾಕೆ1ಇದು ನನ್ನದದು ನನ್ನದೆಂದು ಬರಿದೆ ಹೊತ್ತು ಹೋಯಿತಲ್ಲ ಶ್ರೀಪದುಮನಾಭನ ಕೃಪೆ ಭಕುತಿದಾರಿಯ ಹೊಂದಿ ಪಡೆಯಲಿಲ್ಲ 2ಎರವಿನ ಸತಿಸುತ ಪಶು ಧಾನ್ಯ ಒಂದೊಂದಾಗ್ಯಗಲುವಾಗ ಗತಹರುಷನಾಗಿ ರಂಗನಂಘ್ರಿಯ ಮರೆದುಂಡೆನಿರಯಭೋಗ3ಕರ್ಮತ್ರಯಗಳು ಕರಗವೆ ಶ್ರೀನಿವಾಸನೊಲುಮೆಯಿಂದ ದುಷ್ಕರ್ಮಾರಣ್ಯವು ಸುಟ್ಟು ಹೋಗದೆ ನಾಮಾಗ್ನಿಯಿಂದ 4ಬೇಡಿದುದೀವ ಪ್ರಸನ್ವೆಂಕಟೇಶನ ಬೇಡಬೇಕು ಅವನಹಾಡುತ ಹೊಗಳುತ ಜನ್ಮಾಯುಷ್ಯವ ಹೋಗಾಡಬೇಕು 5
--------------
ಪ್ರಸನ್ನವೆಂಕಟದಾಸರು
ಹೋಯಿತಲ್ಲಾಯುಷ್ಯ ಹೋಯಿತಲ್ಲಯ್ಯಸಾಯಸಬಟ್ಟೆನು ಭವದಿ ಶ್ರೀಯರಸನ್ನ ನಂಬದೆ ಪ.ಪಶ್ಚಿಮ ಜಾಗರದಿ ಕಾಕುತ್ಸ್ಸ್ಥನ ಪ್ರೀತಿಗೋಸುಗದುಶ್ಚಿತ್ತ ವೃತ್ತಿಯನೀಗಿನಿಶ್ಚಿತನಾಗಿಸಚ್ಚಿದಾನಂದಕಾಯನ ಆಶ್ಚರ್ಯಕರ ನಾಮವಉಚ್ಚರಿಸದೆ ನಿದ್ರೇಲಿ ಮೆಚ್ಚಿ ಘುರುಘುರಿಸುತ 1ತುಲಸಿ ಮಂಜರಿ ಪುಷ್ಪ ಅಲಸದೆ ತಂದು ಶ್ರೀನಳಿನನೇತ್ರನ್ನ ನಾಮಾವಳಿಗಳಿಂದಸಲೆ ಅವನಂಘ್ರಿಕಮಲಕರ್ಪಿಸದೆ ಸದಾಲಲನೆಸಂಪದಾಬ್ಧಿಲಿ ಮುಳುಗಿ ದುರಾಶೆಯಲ್ಲಿ2ಸತತ ಶಕ್ತ್ಯಾನುಸಾರ ವ್ರತಧರ್ಮಾಚರಿಸದೆಅತಿಥÀರೊಳೀತನ ನಂಟನೆಂದರೆಅತಿಸ್ನೇಹ ಬಳಸುತ ಹಿತಬಿಟ್ಟೆ ವೃಥಾ ಕೆಟ್ಟೆಗತಿಕಾಣಿಸಿನ್ನಾರೆ ಶ್ರೀಪತಿ ಪ್ರಸನ್ವೆಂಕಟಯ್ಯ3
--------------
ಪ್ರಸನ್ನವೆಂಕಟದಾಸರು