ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ ಪ ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು 1 ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ 2 ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ3
--------------
ಕನಕದಾಸ