ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೇಷಾಚಲ ಮಂದಿರ-ಇಂದಿರೇಶ ಪ. ಪಾದ ಸ್ಮರಣೆಯಿತ್ತು ಅ.ಪ ಕರಣಕ್ರಿಯಕರ್ಮಂಗಳೆಲ್ಲವು ಜಡವು ಕರ್ಮ ನಿನ್ನ ನಿಯಮನವಿಹುದು ನಿರುತ ಪರವಶನಾಗಿ ನಾ ಮಾಳ್ಪೆನೆಂಬ ಈ ದುರಭಿಮಾನದಿ ನಾ ಭವಕೊಳಗಾದೆನೊ 1 ವಿಷಯಂಗಳೆಲ್ಲ ಜ್ಞಾನಗೋಳಕದಿ ಬಂದು ಎನ್ನ ವಿಷಮಗೊಳಿಸಿತು ಮನ ಅಭಿಮಾನದಿಂದಲಿ ಹೃಷೀಕಪನೆ ಎನ್ನ ಮನವಿಷಮತೆಯ ಹರಿಸಿ ಪೋಷಿಸೊ ನಿರುತ ಕೃಪಾಕರ ಮೂರುತೇ 2 ದೋಷದೂರನೆ ನಿನ್ನ ವಿಸ್ಮರಣೆಯಿಂದಲಿ ವಾಸುಕೀಶಯನ ನೀ ಭೂತಾವಾಸ ನೀನಾಗಿರೆ ಮೋಸಹೋದೆನ್ನನು ಪೋಷಿಸಬೇಕಯ್ಯ 3 ಕುಟಿಲ ಮನದಲಿ ನಿನ್ನ ಭಕುತನೆಂದೆನಿಸಿದೆ ವಟಪತ್ರಶಾಯಿ ನೀ ಹಟ ಸಾಧನಕ್ಕೆ ಒಲಿಯೆ ದಿಟಭಕುತಿಯ ಕೊಟ್ಟು ಕಡೆ ಹಾಯಿಸಯ್ಯ 4 ತನುಛಾಯೆ ಕ್ರಿಯೆಯು ತನ್ನ ತನುವನಾಶ್ರೈಸಿದಂತೆ ನಾ ನಿನ್ನ ಪ್ರತಿಬಿಂಬನಾಗಿರಲು ಸದಾ ಎನ್ನ ಕ್ರಿಯೆಗಳೆಲ್ಲಾ ನಿನ್ನ ಆಣತಿಯಂತಿರೆ ಘನಮಹಿಮನೆ ನಿನ್ನಾಕ್ರಿಯವನರಿಯದೆ ಹೋದೆ5 ಪನ್ನಗಾಚಲನಿಲಯ ಆಪನ್ನರಕ್ಷಕ ನೀನಿರೆ ಬನ್ನಬಡಲ್ಯಾಕಯ್ಯ ಅನ್ಯರನಾಶ್ರಯಿಸಿ ಮನೋವಾಕ್ಕಾಯ ಕರ್ಮವನರ್ಪಿಸಲು ಸನ್ಮತಿಯನೆ ಇತ್ತು ಸತತ ಸಲಹಯ್ಯ 6 ಸರ್ವಸತ್ತಾಪ್ರದನೆ ಸರ್ವಪ್ರವೃತ್ತಿಪ್ರದನೆ ಸರ್ವರಂತರ್ಯಾಮಿ ಮಮಕುಲಸ್ವಾಮಿ ಉರಗಾದ್ರಿವಾಸವಿಠಲ ನಿನ್ನಯ ದಿವ್ಯ ಚರಣಸ್ಮರಣೆಯನಿತ್ತು ಕಾಯೊ ಕಮಲಾಕಾಂತ7
--------------
ಉರಗಾದ್ರಿವಾಸವಿಠಲದಾಸರು
ವದರಿ ವದರಿ ತರ್ಕವ ಹೊದ್ದಿದೆ ನರಕವ ಪಸಾಧುಗಳ ಕಂಡು ಕ್ರೋಧಕೆಡೆಗೊಂಡುವಾದಿಸಿ ವಾದಿಸಿ ಕಂಡೆ ಏನ ಎಲೆ ಹಳ್ಳಿ ಕೋಣ1ನರಿಗೆ ಎತ್ತ ಸಿಂಹಕೆ ಎತ್ತಸರಿಯ ಮಾಡೆ ಸಾಟಿಯಹುದೇನೋಡು2ಹರಿಯ ವಂದಿಸಿ ಹರನ ನಿಂದಿಸಿಬರಿದೆ ಬರಿದೆ ಬೆಂಕಿ ಬಿದ್ದೆಯಲ್ಲೋ ರಣಹದ್ದೇ3ಈ ತೆರದಿಂದ ವಾದಗಳಿಂದಮಾತಿನ ಮಾತಿನ ಮಾಲೆಗಳಿಂದ ಕುನಿ ಜನ್ಮಕ್ಕೆ ಹೋದೆ4ಸತ್ಯದಿಂದ ಚಿದಾನಂದನಿತ್ಯನಿತ್ಯದಿ ತಿಳಿಯದುದೆ ವ್ಯರ್ಥ ಕೆಟ್ಟುಹೋದೆ5
--------------
ಚಿದಾನಂದ ಅವಧೂತರು