ಹ್ಯಾಗೆ ಮರೆತೆಯೋ ತಾಯಿ ಎನ್ನ ಶ್ರೀಹರೆ
ಜಾಗು ಮಾಡದೆ ನಾಗಶಯನ
ಬ್ಯಾಗ ಬಂದೆನ್ನೀಗಳೆ ಪೊರೆ ಪ
ನಿರ್ಜರ ವಂದಿತ
ಚೋರಾ ಸುರಸ್ತೋಮ ಮಥsÀನ
ಶೇರಿಗೆ ನಿನ್ನಂಘ್ರಿಗಳಲಿ ಘೋರ ದುರಿತ
ಹೀರಿ ಕಾಯಿ ಎನ್ನನಾ ಮುರಾರಿ 1
ಸನ್ನುತ ನಿನ್ನ ನಾಮ ಪಾಡುವೆ-
ನೆನ್ನ ವಿಷಯನ್ಹಾರೈಸದೆ ಪಾದವೆ
ಎನಗೆ ಗತಿಯೋ ಕಾಯಿ ನೀನೇ
ಅನ್ಯರನೇಕೆ ಹುಡುಕಲಿ ಸುರಕಾಮಧೇನು 2
ವಿರಸತಾಗಿ ಹೋದೆನಾ ಸಂಸಾರದಿ
ಭರದಿ ನಿನ್ನ ಮರೆಹೊಕ್ಕೆನು ಮುದದಿ
ನರಸಿಂಹವಿಠ್ಠಲ ಕಾಯೋ ಅನಾದಿ 3