ಒಟ್ಟು 5 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನೇನುಗತಿಎನಗೆಲೊ ಹರಿಯೆ |ನಿನ್ನನು ನೆನೆಯದೆ ಮೋಸಹೋದೆನಲ್ಲ ಪಅಂಕದೊಳಾಡುವ ಶಿಶುವಿನ ಮುದ್ದಿನ |ಬಿಂಕದ ನುಡಿಗಳ ಕೇಳುತಲಿ ||ಕಿಂಕಿಣಿಧ್ವನಿಯನು ಕಿವಿಗೊಟ್ಟು ಕೇಳುತ |ಮಂಕು ಹರಿಣನಂತೆ ಆದೆನಲ್ಲ 1ಪರವನಿತೆಯರ ಲಾವಣ್ಯಕೆ ಲೋಚನ |ಚರಿಸುತಲವರ ಕೂಟಕೆ ಬೆರಸಿ ||ಉರಿವ ಕಿಚ್ಚು ತನಗೆ ಹಿತವೆಂದು ಅದರೊಳು |ಎರಗಿದ ಪತಂಗದಂತಾದೆನಲ್ಲ 2ತೊಡೆಯೆಡೆ ಗುಹ್ಯಕಾಂಬೆನೊ ಕಾಣೆನೋ ಎಂದು |ಮಡದಿಯರಂಗಸಂಗವ ಮಾಡುತ ||ಒಡಲ ತೀಟಕೆ ಪೋಗಿ ಬಡಿಗಲ್ಲ ಕೆಡಹಿಕೊಂ-|ಡಡಗಿದ ಮೂಷಕನಂತಾದೆನಲ್ಲ 3ಸಲೆ ನಿಜ ವೃತ್ತಿಯ ಬಿಟ್ಟು ಪರಾನ್ನವ |ನಲಿದುಂಡು ಹೊಟ್ಟೆಯ ಹೊರೆಯುತಲಿ ||ಬಲೆಯ ತುದಿಯ ಮಾಂಸಕೆ ಬಂದೆರಗುತ |ಸಿಲುಕಿದ ವಿೂನಿ ನಂತಾದೆನಲ್ಲ 4ಲಂಪಟನಾಗಿ ನಾರಿಯರ ಮುಖಾಬ್ಜದ |ಸೊಂಪಿನ ಕಂಪನಾಘ್ರಾಣಿಸುತ ||ಸಂಪಿಗೆ ಹೂವಿನ ಮೇಲೆ ಮಲಗಿ ತನ್ನಸೊಂದಳಿದಳಿಯಂತೆ ನಾನಾದೆನಲ್ಲ 5ಇಂತು ಪಂಚೇಂದ್ರಿಯ ತಮತಮ್ಮ ವಿಷಯಕೆಮುಂತಾಗಿ ತಮ್ಮ ತಾವಲೆಯುತಿರೆ ||ಸಂತತ ತವತಮ ವಿಷಯಕೆ ಎಳಸಲುಕಾಂತಾರದರಸನಂತೆ ಆದೆನಲ್ಲ 6ಕಂದರ್ಪಲೀಲೆಯ ಗೆಲಿದುಳ್ಳ ಭಕ್ತಿಯ |ತಂದು ಪಂಚೇಂದ್ರಿಯಗಳಿಗೆನ್ನಯ ||ತಂದೆಪುರಂದರವಿಠಲನ ನೆನೆದರೆ |ಎಂದೆಂದಿಗೂ ಭವಬಂಧನ ಬಾರದಲ್ಲ 7
--------------
ಪುರಂದರದಾಸರು
ಭ್ರಾಂತನಾದೆನಲ್ಲ ಪರಗತಿ ಚಿಂತೆಯೆಂಬೊದಿಲ್ಲ ಶ್ರೀಮೋಸ ಹೋದೆನಲ್ಲ ವಿಷಯದ ಆಶೆ ತೀರಲಿಲ್ಲಮಂದನಾದೆನಲ್ಲ ದಿನಗಳು ಸಂದು ಹೋದವಲ್ಲದೇಹ ನಿತ್ಯವಲ್ಲ ಮಮತೆಗೇಹವ್ಯರ್ಥವಲ್ಲ
--------------
ಗೋಪಾಲದಾಸರು
ಮೋಸ ಹೋದೆನಲ್ಲ - ಸಕಲವು-|ವಾಸುದೇವಬಲ್ಲಪಭಾಸುರಂಗ ಶ್ರೀ ವಾಸುಕಿಶಯನನ |ಸಾಸಿರ ನಾಮವ ಲೇಸಾಗಿ ಪಠಿಸದೆ ಅ.ಪದುಷ್ಟಜನರ ಕೂಡಿ - ನಾನತಿ-|ಭ್ರಷ್ಟನಾದೆ ನೋಡಿ ||ಸೃಷ್ಟಿಗೊಡೆಯ ಮುರ-ಮುಷ್ಟಿಕ ವೈರಿಯ |ದೃಷ್ಠಿಯಿಂದ ನಾ ನಿಟ್ಟಿಸಿ ನೋಡದೆ 1ಕಾಯವು ಸ್ಥಿರವಲ್ಲ-ಎನ್ನೊಳು-|ಮಾಯೆತುಂಬಿತಲ್ಲ ||ಪ್ರಾಯ ಮದದಿ ಪರಸ್ತ್ರೀಯರ ಕೂಡುತೆ |ಕಾಯಜಜನಕನ ಧ್ಯಾನವ ಮಾಡದೆ2ಕಂಗಳಿಂದಲಿ ನೋಡೊ-ದೇವಾನಿ-|ನ್ನಂಗ ಸಂಗವ ನೀಡೋ ||ಮಂಗಳ ಮಹಿಮ ಶ್ರೀ ಪುರಂದರವಿಠಲ ನಿ-|ನ್ನಂಗದೊಳಿರುವಂತೆ ದಯವನು ಮಾಡೊ 3
--------------
ಪುರಂದರದಾಸರು
ಮೋಸ ಹೋದೆನಲ್ಲ -ವಿಠಲ- ಮೋಸ ಹೋದೆನಲ್ಲಾ ಪಆಸೆಬಿಟ್ಟು ಹಂಬಲಿಸಿ |ಹೇಸಿ ನರಕದೊಳಗೆ ಸಿಲುಕಿ ಅ.ಪಪುಷ್ಪ ಶ್ರೀ ತುಳಸಿಯನ್ನು |ಒಪ್ಪದಿಂದ ಮನೆಗೆ ತಂದು ||ಅಪ್ಪ ಕೃಷ್ಣನ ಪೂಜೆಯ ಮಾಡಿ - ಮೇ-|ಲಿಪ್ಪ ಲೋಕದ ಸೂರೆಗೊಳದೆ 1ಕಾಯದಾಸೆಗೆ ಕಂಡುದ ಬಯಸಿ |ನಾಯಿಯಂತೆ ಮನೆಮನೆ ತಿರುಗಿ ||ಮಾಯಾಪಾಶದೋಳಗೆ ಸಿಲುಕಿ |ಜೀಯನಿನ್ನನು ಧ್ಯಾನಿಸಲರಿಯದೆ2ಸತಿಸುತರು- ಪಿತೃ-ಬಾಂಧವರು |ಪಥವ ತೋರಿಸಬಲ್ಲರೆ ಇವರು ||ಗತಿನೀನೇಪುರಂದರವಿಠಲ |ಹಿತವ ತಾಯಿ ತಂದೆ ನೀನು 3
--------------
ಪುರಂದರದಾಸರು