ಧರಾ ರಮಣ ಸ್ವಾಮಿ ಪುಷ್ಕರಿಣೀ ತೀರದೊಳಿರುತಿಹನೆ ಪ
ವರಾಹರೂಪದಿ ಹಿರಣ್ಯಾಕ್ಷನ ಸಂಹರಿಸಿದವ ನೀನೆ ಭೂಧರನೇ ಅ.ಪ.
ನೀನಲ್ಲದೆ ಭಕುತರ ಮಾನದಿಂ ಪೊರೆವರಿನ್ಯಾರು ಪೇಳೊ
ಮೊರೆಯ ಕೇಳೊ | ದಯಾಳೊ 1
ಪಾದ ನಂಬಿದೆನೊ ಸ್ವಾಮಿ
ಶ್ರೀಭೂಮಿ ನಿಷ್ಕಾಮಿ 2
ಏಸು ಜನುಮದ ಪಾಪರಾಸಿಗಳಳಿದು ಹೋದವೆಲ್ಲ
ಶ್ರೀಶ ನಿನ್ನ ಸಂದರ್ಶನದಿಂದ ರಂಗೇಶವಿಠಲ ಭೊಲೋಲ 3