ಒಟ್ಟು 10 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುಲ್ಲು ಹುಟ್ಟಿತು ಗ್ರಾಮದೊಳಗೆ ಗಲಿಬಿಲಿಯಾಯಿತು ನೀವು ಕೇಳಿಖುಲ್ಲರು ಕುಲಸಹ ಕೂಡೆ ಮಡಿದರು ನೀವು ಕೇಳಿ ಪ ಮರ ಮುರಿದೊರಗಿತು ನೆರಳೆ ನೆಲೆಯಾಯಿತು ನೀವು ಕೇಳಿಕುರಿತಳೇ ಸತ್ತವು ನರಿ ಮಾಳಿಗೆ ಏರಿತು ನೀವು ಕೇಳಿ 1 ಅತ್ತೆಯು ಅಳಿದಳು ಸೊಸೆಯು ಸುಖಿಸಿದಳು ನೀವು ಕೇಳಿಮುತ್ತೈದೆಯಾದಳು ರಂಡೆ ತಾನೀಗ ನೀವು ಕೇಳಿ2 ಕೊಡವೊಡೆಯಿತು ಕಳ್ಳರ ತಲೆ ಹೋದವು ನೀವು ಕೇಳಿನಡೆದುಹೋದರು ಬಯಲೂರಿಗೆ ಗೂಳೆಯ ನೀವು ಕೇಳಿ 3 ಮಂಡೆಗೆ ಕೈ ಬಂದಿತು ಮುರುಕು ಆಯಿತು ಹುಟ್ಟು ನೀವು ಕೇಳಿರುಂಡವಿಲ್ಲದೆ ತಲೆ ಬಂದು ಹತ್ತಿತು ನೀವು ಕೇಳಿ 4 ಗುಡ್ಡದ ಸಂದಿಯ ನೀರನೆ ಕುಡಿದು ನೀವು ಕೇಳಿದೊಡ್ಡ ಚಿದಾನಂದ ಗುರುವ ಸೇರಿದರು ನೀವು ಕೇಳಿ 5
--------------
ಚಿದಾನಂದ ಅವಧೂತರು
ನಾದವ ಕೇಳುತ ನಿದ್ರೆಯ ಮಾಡುತ ಬ್ರಹ್ಮವು ತಾನಾಗಿನಾದವ ಕೇಳುತ ನಾನಾ ಗುಣಗಳು ಹೋದವು ತಾವಾಗಿ ಪ ಕೂಡಿತು ದೃಷ್ಟಿ ಪರಬ್ರಹ್ಮದಿ ತಾ ಅನುದಿನದಲಿ ಬಾಗಿಮನ ಇಂದ್ರಿಯಗಳು ಹುಡುಕಿದರಿಲ್ಲ ಹೋದವು ತಾವಾಗಿ1 ನಾನಾ ವರ್ಣದ ಛಾಯೆಯ ನೋಡುತ ನಿದ್ರೆಯ ಮಾಡಿದೆನೋಭಾನು ಕೋಟಿ ಛಾಯೆಯ ನೋಡುತ ನಿದ್ರೆಯ ಮಾಡಿದೆನೋ 2 ಕಾಣದ ರೂಪದ ಕಾಣುತಲೆ ನಾ ಕಾಮಿಸಿ ಮಲಗಿದೆನೋಬೋಧ ಚಿದಾನಂದ ಸದ್ಗುರು ನಾಥನ ಧ್ಯಾನವ ಮಾಡಿದೆನೊ 3
--------------
ಚಿದಾನಂದ ಅವಧೂತರು
ಮಳೆಯ ದಯಮಾಡೊ ರಂಗಯ್ಯ ನಿಮ್ಮ ಕರುಣ ತಪ್ಪಿದರೆ ಉಳಿಯದೀ ಲೋಕ ಪ. ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳ ಹಸಿದು ಬಾಯಾರಿ ಬತ್ತಿದ ಕೆÀರೆಗೆ ಬಂದು ತೃಷೆಯಡಗದೆ ತಲ್ಲಣಿಸಿ ಮೂರ್ಛೆಗೊಂಡು ದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ 1 ಧಗೆಯಾಗಿ ದ್ರವಗುಂದಿ ಇರುವ ಬಾವಿಯ ನೀರ ಮೊಗೆ ಮೊಗೆದು ಪಾತ್ರೆಯಲಿ ನಾರಿಯರು ಹಗಲೆಲ್ಲ ತರುತಿಹರು ಯೋಚನೆಯ ಮಾಡುತ್ತ ಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ2 ಸಂದು ಹೋದವು ಜ್ಯೇಷ್ಠ ಆಷಾಢ ಶ್ರಾವಣ ಬಂದಿದೆ ಭಾದ್ರಪದ ಮಾಸವೀಗ ಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊ ಸಂದೇಹವಿನ್ಯಾಕೆ ಹೆಳವನಕಟ್ಟೆಯ ರಂಗ3
--------------
ಹೆಳವನಕಟ್ಟೆ ಗಿರಿಯಮ್ಮ
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಸೃಷ್ಟಿಯೊಳಗೆಲ್ಲ ದುಷ್ಟರ ಪ್ರಭೆಯಾಗಿ ನಿಷ್ಠರುದೋರದಂತಾದರು ಮಾ ಧ್ರುವ ಭ್ರಷ್ಟರು ಬೂಟಿಕಿ ಶಿಷ್ಠರೆ ಕೈಕೊಂಡು ನಿಷ್ಠರಿಗಾಟ್ಲಿ ತಂದರು ಮಾ ತುಟ್ಟಿಲೆ ಮಿಸುಕದೆ ಗುಟ್ಟಿಲಿದ್ದವರ ಬಟ್ಟೆಗ್ಯಳದಿನ್ನು ತಾಹರು ಮಾ ಹೊಟ್ಟೆಯೊಳು ಹೊಕ್ಕು ಕಟ್ಟಲೆ ಕುಳಿತಿನ್ನು ನೆಟ್ಟ ನೇರಿಷ್ಟ ನೇಮಿಸುರು ಮಾ ಇಟ್ಟ ತೊಟ್ಟವರನು ಕೆಟ್ಟದೃಷ್ಟಿಲೆ ನೋಡಿ ದಿಟ್ಟತನದಿ ಪ್ರಾಣಕೊಂಬರು ಮಾ 1 ಕೊಟ್ಟು ಹಣಹೊನ್ನು ಇಟ್ಟದ್ದು ಬೇಡಲು ಕುಟ್ಟಿ ಅವನಬಾಯಿ ಹಾರರು ಮಾ ತುಟ್ಟಿಲೆ ವಂದಾಡಿ ಹೊಟ್ಟಲೆ ವಂದಿಟ್ಟು ನೆಟ್ಟನೆ ಘಾಸಿಮಾಡರು ಮಾ ಗಂಟುಳ್ಳವರ ಕಂಡು ಕಟ್ಟಿದಂಡಗಳನ್ನು ನಷ್ಟತನದಿ ಹೊಟ್ಟೆ ಹೊರುವರು ಮಾ ಬಟ್ಟಿಲೆ ತೋರಲು ಬಿಟ್ಟಿಯ ಹಿಡಿದಿನ್ನು ಹೆಟ್ಟಿ ಅವನ ಮುಂದೆ ನಡೆಸುರು ಮಾ 2 ಶುದ್ದಿಯು ಇಲ್ಲದೆ ರಾಜ್ಯಾಧಿಪತಿಗಳು ಇದ್ದು ಇಲ್ಲದಂತಾದರು ಮಾ ಮಂದಮತಿಗಳು ಅಂದಣವೇರಿನ್ನು ಬುದ್ಧಿವಂತರೀಗ್ಹೀನತಂದರು ಮಾ ಮುದ್ರಾಧಾರಿಗಳೆಲ್ಲ ಕ್ಷುದ್ರದೃಷ್ಟಿಯು ಮಾಡಿ ಕ್ಷುದ್ರತನದಿ ಕೆಡುತಿಹರು ಮಾ ಸಿದ್ಧಸಾಧಕರೆಲ್ಲ ಗುದ್ದನೇ ಹೊಕ್ಕರು ಇದ್ದರೆ ಬುದ್ಧಿಹೀನರು ಮಾ 3 ಉಳಿಯಮುಟ್ಟಿದ ದೈವ ಉಳಿಯದೇ ಹೋದವು ಉಳಿಗಾಲ ವಿಲ್ಲದಂತಾಯಿತು ಮಾ ತಿಳಿವಳಿಕುಳ್ಳವರೆಲ್ಲ ತಲೆಮುಸಕ್ಹಾಕಿನ್ನು ಕಳ್ಳರೆ ಸಾಜರು ಆದರು ಮಾ ಒಳ್ಳೆಯವರ ನುಡಿ ಎಳ್ಳಷ್ಟು ಮಾಡುತ ಸುಳ್ಳರು ನಿಜನುಡಿವೆಂಬುರು ಮಾ ಉಳ್ಳವರು ಖಳಬುದ್ಧಿ ಕೈಕೊಂಡು ಇಳೆಯೊಳು ಧರ್ಮವ ಜರೆದರು ಮಾ 4 ಸಾಧುಸಜ್ಜನರೆಲ್ಲ ಭೇದವ ಅಡಗಿಸಿ ಮೇಧಿನಿಯಲು ಗುಪ್ತರಾದರು ಮಾ ಇದ್ದರ ಘನಸುಖ ಸಿದ್ಧರ ನೆರೆಯಲಿ ಬುದ್ಧಿಹೀನರು ತಾವು ಅರಿಯರು ಮಾ ಸದ್ಗುರು ಕೃಪೆಯಿಂದ ಸದ್ಬ್ರಹ್ಮದ ನೆಲೆಯ ಸತ್ ಶಿಷ್ಯಮಹಿಪತಿ ತಿಳಿದನು ಮಾ ಎಂದಿಗೆ ಬೇಡಿನ್ನು ದುರ್ಜನರ ಸಂಗವು ತ್ರಾಹಿ ತ್ರಾಹಿ ತ್ರಾಹಿ ಎಂದನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈಗಾಗೋ ಇನ್ನಾವಾಗೋ ಮತ್ತೀಗಾತ್ರ ಅಸ್ಥಿರವಣ್ಣಹೇಗಾದರು ಹೊಗಳಾಡಲಿ ಬೇಕುನಾಗಾರಿಗಮನನ್ನ ಪ.ಮನಹರಿದತ್ತಲೆ ಹರಿಹರಿದಾಡಿದಿನ ಹೋದವು ವೃಥಾ ನೋಡಿ ದುರ್ಧನದಾಸೆಲಿ ಬಾಡಿ ದುರ್ಜನರಾರಾಧನೆ ಮಾಡಿ ಈತನು ಚಪಲತೆ ಹೋಗಾಡದೆ ಶ್ರೀಹರಿಗುಣಕುಣಿದು ಕೊಂಡಾಡಿ1ತುಂಬಿದಸಿರಿಬಿಡಿಸಿ ಸೆರೆ ಒಯಿವರು ವಿಲಂಬಿಲ್ಲದೆ ಜವನವರು ಕೃಪೆಯೆಂಬುದ ಅರಿಯರು ಅವರುಹಲವ್ಹಂಬಲಿಸಿದರೊದೆವರು ಸುಡುನಂಬಲಿಬಾರದು ಸಂತೆಯವರಅಂಬುಜನಾಭನ ಸಾರು 2ಸಕಳಾಗಮ ವೇದೋಕ್ತಿ ವಿಚಾರಕೆಮುಖವೆನಿಸುವುದಾಚಾರ ಆಸುಖವೇ ಧರ್ಮದಸಾರಈಅಖಿಳಕೆ ಪ್ರಭು ಯದುವೀರಭಕ್ತವತ್ಸಲ ಪ್ರಸನ್ವೆಂಕಟರಾಯನಸಖ್ಯವಿಡಿದರೆ ಭವದೂರ 3
--------------
ಪ್ರಸನ್ನವೆಂಕಟದಾಸರು
ದಡ ಸೇರಿಸು ಭವದ ಕಡಲಿನದಡ ಸೇರಿಸು ಹರಿಯೆಕಡೆ ಮೊದಲಿಲ್ಲದ ಕ್ಲೇಶದ ವಾರಿಯಕಡು ಕಾಂಕ್ಷದ ಬಲುತೆರೆಯ ಪ.ಸಾಧು ಸಮಾಗಮ ಸಚ್ಛಾಸ್ತ್ರ ಶ್ರವಣಾದಿಗಳಿಲ್ಲದೆ ಕೆಡುವೆಮೇದಿನಿಯೊಳು ಮೂಢಾತ್ಮನು ನಾ ಶ್ರೀಪಾದವ ಹೊಂದಿಸು ಹರಿಯೆ 1ಸಾಸಿರ ನಾಮದಿ ತುಲಸೀ ಕುಸುಮವಶ್ರೀಶನಿಗರ್ಪಿಸಲಿಲ್ಲಹೇಸದೆ ಬಾರದುದನ್ನೆ ಬಯಸುತವಾಸುದೇವಕೆಟ್ಟೆನಲ್ಲ2ಮನ ವಶವಾಗದು ತನು ಮಡಿಯಾಗದುಕನಸಲಿ ಧರ್ಮವನರಿಯೆಒಣಮಾತಲಿ ದಿನ ಹೋದವು ಪರಗತಿಗನುಕೂಲಲ್ಲದು ದೊರೆಯೆ 3ದುವ್ರ್ಯಸನಕೆ ಬೇಸರೆನೆಂದಿಗೆಘನಗರ್ವಿಲಿ ವರ್ತಿಪೆನಲ್ಲಪರ್ವತ ನೆಗಹುವ ನುಡಿಯನ್ನಾಡುವೆನಿರ್ವಾಹಕಡ್ಡಿಯೊಳಿಲ್ಲ4ನನ್ನ ಗುಣದ ನಂಬಿಕೆ ನನಗಿಲ್ಲನಿನ್ನಯ ನಾಮವೆ ಗತಿಯುಇನ್ನಾದರು ಕಡೆಗಣ್ಣಲೆನೋಡುಪ್ರಸನ್ವೆಂಕಟ ಸಿರಿಪತಿಯೆ 5
--------------
ಪ್ರಸನ್ನವೆಂಕಟದಾಸರು
ವೈರಾಗ್ಯದಾವಾಗ್ನಿ ಉರಿಯು ಛಟಿಛಟಿಸಿತುಸರ್ವಪ್ರಪಂಚವೆಲ್ಲವ ಅಟ್ಟಟ್ಟಿ ಸುಟ್ಟಿತುಪಸತಿಸುತರು ಎಂಬ ಹೆಮ್ಮರವೀಗ ಸುಟ್ಟವುಪಿತೃ ಮಾತೃವೆಂಬ ಪಲ್ಲವ ಕರಿಕಿಟ್ಟಿತುಹಿತವೆಂಬ ಬಳ್ಳಿಗಳು ಅನಿಲ ಪುಟ್ಟವಿಟ್ಟವುಅತಿಭಾಗ್ಯವೆಂದೆಂಬ ಸಿಂಗಾರ ಹೊಗೆಯಿಟ್ಟವು1ಏಸೋ ಬಂಧುಗಳೆಂಬ ಧ್ರುಮವು ಶಿಖಿಸೋಂಕಿದವುಕ್ಲೇಶವೆಂದೆಂಬ ಕರಡವು ಭುಗಿ ಭುಗಿ ಲೆಂದವುವಾಸಗಳೆಂದೆಂಬಕುಡಿಕಿಡಿಯಾಗಿ ಉದುರಿದವುಆಸೆ ಎಂಬ ಫಲ ವಹ್ನಿಗಾಹಾರವಾದವು2ಘನಭ್ರಾಂತಿ ಎಂಬ ಪಕ್ಷಿಗಳು ಹಾರಿಹೋದವುಮನೆಯೆಂಬ ಗೂಡುಗಳು ನಿಗಿನಿಗಿಯಾದವುಬಿನುಗುಚಿಂತೆ ಎಂಬ ಹರಿಣ ಮುಗ್ಗರಿಸಿದವುಮನಸಿಜನ ಕ್ರೋಧವೆಂಬ ಕಳ್ಳರು ಸತ್ತಿಹರು3ಅಷ್ಟಮದದಾನೆ ಎಂಬುವು ಅಡವಿಯ ಹಿಡಿದವುತುಚ್ಛವಿಷಯಗಳೆಂಬ ನರಿಗಳೋಡಿದವುದುಷ್ಟಗುಣವೆಂದೆಂಬ ದುರ್ಜನ ಮೃಗವು ಚಲ್ಲಿದವುಕಷ್ಟ ತಾಪತ್ರಯದ ಕತ್ತಲು ಹರಿಯಿತು4ಇಂತು ಪ್ರಪಂಚವೆಂಬೀ ವೈರಾಗ್ಯದಾವಾಗ್ನಿಯಂತೆ ಧಗಧಗನೆ ಝಗಝಗನೆ ಸುಡುತಲಿಚಿಂತಯಕ ಚಿದಾನಂದ ಉರಿಯು ಅಖಂಡವಾಗಿಶಾಂತರೆಂಬರ ಮುಕ್ತರುಗಳ ಮಾಡಿತ್ತು5
--------------
ಚಿದಾನಂದ ಅವಧೂತರು