ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಸು ಜನ್ಮದ ಸುಕೃತವದು ಬಂದು ಒದಗಿತೋದೇಶಿಕೋತ್ತಮನ ದಯದಿಆಸೆಗಳು ಮರೆಯಾಗಿ ಆಷ್ಟ ಪಾಶಗಳಳಿದುಈಶ ಸರ್ವೇಶನಾಗಿ ಹೋದೆ ಪ ಕಂಗಳ ಮುಚ್ಚಿ ದೇಹದೊಳು ದಿಟ್ಟಿಸಿ ನೋಡೆಮಂಗಳವೆ ತೋರುತಿಹುದು ಅಹುದುತಿಂಗಳಿನ ಕಳೆಯಂತೆ ಬೆಳಕಬೀರುತ ಬೆಳು-ದಿಂಗಳನೆ ಹರಡಿದಂತೆ ಅಂತುಕಂಗೊಳಿಸುತಿಹುದು ಬಗೆಬಗೆಯ ವರ್ಣಛಾಯೆಅಂಗ ವರ್ಣಿಸುವರಾರೋ ಆರೋಬಂಗಾರ ಪುಟದಂತೆ ನಡುಮಧ್ಯೆ ಹೊಳೆಹೊಳೆದುಹಿಂಗದನುದಿನ ತೋರುವ ಗುರುವಾ 1 ಅಮೃತ ಕಳದಿ ಝಳದಿ 2 ನಿತ್ಯವಹ ಪರಮಾತ್ಮ ನಿಶ್ಚಲದಿ ತೋರುತಿದೆಚಿತ್ತವೆಂಬುದು ಸಾಯೇ ಬೇಯೆಮತ್ತೆ ಮನ ದೃಗ್ ದೃಶ್ಯ ಧಾರಣರವರುಎತ್ತ ಹೋದರೋ ಎಲ್ಲರೂಸತ್ಯವಾಗಿಹ ಪರಮ ಬಾಹ್ಯಾಂತರೀಯ ಹೆಸರುಎತ್ತುವರು ಇಲ್ಲದಾಯ್ತು ಹೋಯ್ತುಪ್ರತ್ಯಗಾತ್ಮನು ಚಿದಾನಂದ ಗುರು ತಾನಾದಅತ್ಯುಕ್ತಿ ಹೇಳ್ವುದೇನು ಏನು 3
--------------
ಚಿದಾನಂದ ಅವಧೂತರು
ದಂಡು ಬರುತಿದೆ ಆರೇರ ದಂಡು ಬರುತಿದೆ ಬಂದೆವು ನಾಲ್ಕು ಮಂದಿ ಪ ಅಮ್ಮ ಲಿಮ್ಮಿ ಬೊಮ್ಮಿ ನಾನು ಸುಮ್ಮನೊಂದು ಮರೆಯಲಿರಲು ಜಮ್ಮನವರು ಬಂದು ಹಿಡಿದು ಗುಮ್ಮಿಹೋದರು ನಮ್ಮನ್ನೆಲ್ಲ 1 ಅತ್ತೆಮಾವ ಮೈದುನರು ಎತ್ತಹೋದರೋ ಕಣ್ಣಲಿಕಾಣೆ ಕತ್ತೆ ಹೆಣ್ಣೆ ಹೋಗು ಎಂದು ಬತ್ತಲೆಬಿಟ್ಟರು ಎನ್ನ 2 ದಿಂಡ್ಯ ದಿಂಡ್ಯ ಜವ್ವನೆಯರು ಕಂಡ ಕಂಡೆಗೆ ಹೋಗಿ ಬೇಗ ದಂಡಿನವಗೆ ಸಿಕ್ಕಿ ಕೆಟ್ಟು ಕೊಂಡು ಬಾಳ್ವುದೊಳ್ಳಿತಲ್ಲ 3 ರಂಡೆ ಮುಂಡೆರೆಂದವರು ಬಿಡರು ಕಂಡಮಾತ ಹೇಳುತೇನೆ ಪೆಂಡಾರರಿಗೆ ಸಿಕ್ಕು ಕೆಟ್ಟು ಗಂಡು ಕೂಸು ಪಡೆಯದಿರಿ 4 ಮಾನವುಳ್ಳ ಹೆಣ್ಮಕ್ಕಳು ನಾನು ಪೇಳ್ವಮಾತಕೇಳಿ ತಾನೆ ಸೇರಿ ಲಕ್ಷ್ಮೀರಮಣ ಧ್ಯಾನವನ್ನು ಮಾಡುಕಂಡ್ಯಾ 5
--------------
ಕವಿ ಪರಮದೇವದಾಸರು
ಧುಮ್ಮಸಾಲೆಯ ನೋಡಿ ಧುಮ್ಮಸಾಲೆಯಾ ಪ ಧುಮ್ಮಸಾಲೆಯ ನೋಡಿ ಘಮ್ಮವಾದ ಪ್ರಾಣಿಗಳು | ತಮ್ಮ ಸುದ್ದಿ ತಮಗಿಲ್ಲಾ ಹಮ್ಮಿನಿಂದಲಿ | ಧಿಮ್ಮಹಿಡಿದು ಭವದೊಳು ಸುಮ್ಮನೆವೆ ಕೆಟ್ಟು ಹೋದ | ಗ್ಯಾದರೆಯು ಪರಬೊಮ್ಮನಾಮ ನೆನೆಯಿರೋ 1 ವಿದ್ಯೆಯಿಂದ ವಾದಿಸುತ ಮುದ್ದಿಯಿಂದ ಕಣ್ಣು ಮುಚ್ಚಿ | ಸದ್ಯ ಶಕ್ತಿ ಯೌವನದಿ ಗುದ್ದಿ ಹೆಟ್ಟು ತಾ | ಪರಿ ನಿಜ | ಬುದ್ಧಿ ಹೋಗಾಡಿಸಿ ಅನಿರುದ್ಧನನ ಮರೆತಿರೋ 2 ಒಂದು ಕವಡಿಯಲಾಭ ತಮಗೆ ಹೊಂದದಿದ್ದರೆ ಸರಿ | ಬಂದು ನಿಂದು ಒಳ್ಳೆವರಾ ನಿಂದೆ ಮಾಡುತಾ | ಇಂದು | ಕೂಪ ಲಿಟ್ಟರೋ 3 ಉಡಗಿ ಬಿಟ್ಟು ಹುಡಿಯಹಚ್ಚಿ ಜಡಿಯಬಿಟ್ಟು ಸಿದ್ಧಗಾಗಿ | ಪೊಡವಿಲಿನ್ನು ಲಾಭಾ ಲಾಭಾ ನುಡಿಯ ಹೇಳುವಾ | ತುಡುಗರಿಗೆ ಹೋಗಿಕಾಲ ವಿಡಿದು ಗೋಂದಲ್ಹಾಕುವರು | ಕಡಲಶಯನನ ಭಜಿಸದೆವೆ ಅಡಲು ಬಿಟ್ಟು ಹೋದರೋ 4 ಸಿರಿಯ ಸುಖಗೀಪರಿ ಪರಿಯ ವೃತ ತಪದಿಂದಾ | ಚರಿಸಿ ನೋಡು ಕಣ್ಣು ವಿದ್ದು ಕುರುಡರಾದರೋ | ಗುರುಮಹಿಪತಿ ಸ್ವಾಮಿ ಚರಣ ನಂಬಿಯಚ್ಚರದಿ | ನಿರಪೇಕ್ಷ ಭಕ್ತಿಯಿಂದಾ ತರಣೋಪಾಯ ನೋಡರೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು