ಒಟ್ಟು 8 ಕಡೆಗಳಲ್ಲಿ , 7 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾಯ ನಾಲ್ಕು ಮೃಗಯಾಯೈ ಹಯಾರೂಢಂ ಗಹನೆ ಹಸ್ತಿನಾಹೃತಂ ಪದ್ಮಾವತೀ ಕಟಾಕ್ಷೇಷು ತಾಡಿತಂ ನËಮಿ ಶ್ರೀಪತಂ ವಚನ ಅಂದಿಗಾವೇಂಕಟನು ಇಂದು ಪೋಗಲಿಬೇಕೆಂದು ಸ್ಮರಿಸಿದ ಆ ಕ್ಷಣದಿ ಚೆಂದಾದ ಮೈ ಬಣ್ಣದಿಂದ ಇರುವುದು ಸ್ವರ್ಣ ಬಿಂದುಗಳು ಅಲ್ಲಲ್ಲೆ ಮೇಲ್ಗರಿಯಂ ಒಂದೊಂದು ಚಂದದರÀಳಲೆಯು ದೂರದಿಂದ ಹೊಳೆಯುವುದು 1 ಮತ್ತೆ ಸರಗಳನೆಲ್ಲ ಮತ್ತೆ ಪರಿಮಿತಿಯಿಲ್ಲ ಉತ್ತಮಾಶ್ವವ ತಾನು ಮತ್ತೆ ಮೇಲೆ ಸುತ್ತಿದನು ಕೌಸ್ತುಭ ಶಕ್ತವಸ್ತ್ರಾ2 ಊಧ್ರ್ವಪುಂಡ್ರಾಂಕಿತನು ಆಗಿ ಅಕಳಂಕಕೇಸರ ಕುಂಕುಮಾಂಕಿತ ಶ್ರೀಗಂಧ ಪೊಂಕದಲ್ಲಿ ಪಂಕಜಗಳಿಗೆ ಟೊಂಕದಲಿ ಏಲೆ ಅಡಿಕೆಸಣ್ಣ ಕೊಂಕು ಇಲ್ಲದ ಕನ್ನಡಿ ಕಟ್ಟಿದನು ವಸ್ತ್ರಾದಿಂದÀ 3 ಕಂಠದಲಿ ಇಟ್ಟು ಜರತಾರಿ ಒಂಟಿ ಚಾದರವನ್ನು ಕಂಠದಲಿ ಚಲ್ಲರಿಪುಕಂಟ- ಕಾಗಿರುವಂಥ ಒಂಟಿ ಬಂಟನಾಗಿ ಅಂಟರಾ ಬಿಗಿದು ನೂರೆಂಟು ವೈಕುಂಠನಾಥನು ಎಂಬ ಬಂಟನ ಕುದುರೆ ಹೊರಗ್ಹೊಂಟಿತಾಗ 4 ವೇಂಕಟನು ವನದಲ್ಲಿ ಘನವಾದ ಮದ್ದಾನೆಯನು ಹತ್ತಿ ನಡೆದ ವನಜ ಓಡುತ್ತ ಮುಂದೆ ಸಮ್ಮುಖವಾಗಿ ವಿನಯದಿಂದಲಿ ಸೊಂಡೆಯನು ಮೇಲೆತ್ತಿ ಗರ್ಜನವ ಮಾಡುತಲೆ 5 ಕಂಡು ಗಡಬಡಿಸಿದರು ಮುಗ್ಗುತಲೆ ಒಡಗೂಡಿ ಅಡಗಿದರು ಬೇಗ ದೃಢಭಕ್ತಿ ನಡೆದು ಅಲ್ಲಿಂದ ಹಣಹಣಿಕೆ ನೋಡ್ಯಡಗಿದರು ನಡೆಸಿದನು ಕುದರೆ 6 ಒದರಿದಳು ಅಮ್ಮಯ್ಯ ಏರಿ ನಮ್ಮೆದುರಿಗೆ ಚದುರನಾಗಿ ಮಧುರ ಹೆದರೆ ಬೇಡಿರಿ ನೀವು ಚದುರ ವೃತ್ತಾಂತವನು ಕೆದರಿ ಕೇಳಿರಿ ಅವನ ಇದರಿಗ್ಹೋಗಿ 7 ಬಂದು ಪುರುಷನ ನೋಡಿ ಇಂದು ಇಲ್ಲಿಗೆ ನೀನು ಬಂದ ಗಮನ ತಂದೆತಾಯಿಗಳ್ಯಾರು ಬಂಧು ಮಂದಿ ಎಲ್ಲರು ಏನೆಂದು ಕರೆವರು ನಿನಗೆ ಚಂದಾಗಿ ಕುಲಗೋತ್ರ ಒಂದು ಬಿಡದಲೆ ನಮ್ಮ ಮುಂದೆ ನೀಪೇಳು 8 ಇಂದು ನಮ್ಮ ಮುಂದೆ ಕೇಳಿರಿ ನಮ್ಮ ಕ್ರಮದಿಂದ ಹೇಳುವೆನು ಬಂಧು ತಾ ಬಲರಾಮ ಇಂದು ಸುಭದ್ರೆಯೆಂದೆನಿಸುವಳು ತಂಗಿ ಸುಂದರಾರ್ಜುನ ನಮ್ಮ ಹೊಂದಿರ್ದ ಬೀಗ 9 ಕೃಷ್ಣ ಪಕ್ಷದಲ್ಲಿ ನಾ ಕರೆವರು ಯೆನಗೆ ಕಿವಿಯಲ್ಲಿ ಇಟ್ಟು ಬಹುಸಂತೋಷ ಪೇಳಿರಿ ಎನಲು ಥಟ್ಟನೆ ನುಡಿದಳು ದಿಟ್ಟಪದ್ಮಾವತಿಯು ಸ್ಪಷ್ಟತಾನೆ 10 ಸುವಿವೇಕದ ವೃತ್ತಾಂತ ಶ್ರೀಕರಾತ್ರಿಯ ಗೋತ್ರ ಧರಣೀ ದೇವಿ ವಸುಧಾನ ತಾ ಖೂನ ಪದ್ಮಾವತಿಯು ನೀ ಕೇಳಿ ಆಕೆಯಮೇಲೆ ಸ್ವಲ್ಪ ಪುತ್ರಿ ತಾ ಕೋಪವನು ಎಂದಳಾ ಕಾಲದಲಿ ಹರಿ ವಿವೇಕದಲಿನುಡಿದ11 ಧ್ವನಿ ರಾಗ :ಶಂಕರಾಭರಣ ಭಿಲಂದಿತಾಳ ಇಷ್ಟು ಎನ್ನ ಮೇಲೆ ಏಕೆ ಸಿಟ್ಟು ಮಾಡುವಿ ಬಟ್ಟ ಕುಚದ ಬಾಲೆ ಬಹಳ ನಿಷ್ಠುರಾಡುವಿ 1 ಧಿಟ್ಟ ಪುರುಷ ನೀನು ನಡತೆಗೆಟ್ಟು ಇರುವರೆ ಖೊಟ್ಟಿ ಕುದುರೆಯೇರಿ ಮೈಯ ಮುಟ್ಟ ಬರುವರೆ 2 ಮೆಚ್ಚಿ ಬಂದೆ ನಿನಗೆ ನಾನು ಹೆಚ್ಚಿನ್ಹೆಂಗಳೆ ಇಚ್ಛೆ ಪೂರ್ಣಮಾಡು ನೀನು ಮಚ್ಚಕಂಗಳೆ 3 ಹೆಚ್ಚು ಕಡಿಮೆ ಆಡದೀರು ಹೆಚ್ಚಿನಾತನೆ ಎಚ್ಚರಿಲ್ಲ ಮೈಯ ಮೇಲೆ ಹುಚ್ಚು ಪುರಷನೆ4 ಏನು ಹೆಚ್ಚು ಕಡಿಮೆ ಆಡಿದೇನು ಅನುಚಿತ ನೀನು ಕನ್ಯಾ ನಾನು ವರನು ಏನು ಅನುಚಿತ 5 ಮೂಢನೀನು ಇಂಥ ಮಾತು ಆಡೋದುಚಿತವೆ ಬೇಡ ಅರಸಗ್ಹೇಳಿ ನಿನಗೆ ಬೇಡಿ ಬಿಗಿಸುವೆ 6 ಮಡದಿ ನಿನ್ನ ಕಡೆಯುಗಣ್ಣು ಕುಡಿಯ ಹುಬ್ಬುಗಳ್ ಕಡಿಯದಂಥ ಬೇಡಿ ಎನಗೆ ಕಡೆಗೆ ಅಲ್ಲವೆ 7 ಇಂದು ಪ್ರಾಣವ ತಂದೆ ಕಂಡರೀಗ ನಿನ್ನ ಕೊಂದು ಹಾಕುವ 8 ಜಾಣೆ ನಿನ್ನ ಬಿಡೆನು ಎನ್ನ ಪ್ರಾಣ ಹೋದರೂ ಪ್ರಾಣದರಸಿ ಎನಿಸು ಪಟ್ಟರಾಣಿಯಾಗಿರು 9 ಇಂದು ವ್ಯರ್ಥವು ಹಂದಿನಾಯಿ ಹದ್ದು ಕಾಗೆ ತಿಂದು ಬಿಡುವವು 10 ಎನ್ನ ಫಣಿಯಲ್ಲಿದ್ದ ಲಿಖಿತ ಮುನ್ನ ತಪ್ಪದು ಚನ್ನವಾಗಿ ನಿನ್ನಕೂಡಿ ಇನ್ನು ಇರುವುದು11 ಸೊಲ್ಲ ಕೇಳಿ ಸಿಟ್ಟಿನಿಂದ ನಿಲ್ಲೋ ಎಂದಳು ಎಲ್ಲ ಗೆಳತೆರಿಂದ ಕೂಡಿಕಲ್ಲು ಒಗೆದಳು 12 ಕಲ್ಲು ತಾಗಿ ಕುದುರೆ ಭೂಮಿಯಲ್ಲಿ ಬಿದ್ದಿತು ಬಲ್ಲಿ ದಾನಂತಾದ್ರೀಶನಲ್ಲಿ ಸ್ಮರಿಸಿತು 13 ವಚನ ಆ ಕುದುರೆಯನು ಆಗುತ ವಿವೇಕದಲಿ ಪರಿ ಆಯಿತೀಕಾಲದಲ್ಲೀ ಲೋಕದಲಿ ಕಾಲಬೀಳದಲೆ ಆಕಾಲ ದಲಿ ಹೊರಟೆ ಆ ಕಾರಣದಿಂದೆನಗೆ ಸಂಕಟವು ಸೋಕಿತಿ ಮಾಡಿದ ಕರ್ಮಫಲ ದೊರೆಯದಿರದು 1 ಗಿರಿಯೇರುತಲೆ ತಾನು ಮೂಕತನದಲಿ ಶೇಷಾಯಿಯಂತೆ ಮುಂದಕೆ ಅನೇಕ ಕರೆದು ಕೊಡುವವನ ಶ್ರೀ ಕರುಣದಿ ಆಯಿತು ನಾಲ್ಕು ಅಧ್ಯಾಯ 2
--------------
ಅನಂತಾದ್ರೀಶ - ಕಥನಕಾವ್ಯಗಳು
ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇನ್ನೂ ಭ್ರಾಂತಿಯ ಮಾಡುವರೆ | ನನ್ನದೆಂದು ಆಡುವರೆ |ತನ್ನ ತಾ ತಿಳಿಯದೆ | ಅನ್ಯರ ಗುಣದೋಷ ನೋಡುವರೆ ಪ ಸ್ತುತಿಸುತ ಬಂದರೇನು | ಮತ್ತೆ ಜಲವ ಮಿಂದರೇನು | ಎತ್ತ ಹೋದರೂ ದಣಿವಿಕೆಯಿಲ್ಲದೆ | ನಿತ್ಯಾನಿತ್ಯ ವಿವರಿಸಲಿಲ್ಲ 1 ಮಾತಿನ ಬಣವಿಯನೊಟ್ಟಿ | ಸ್ವಂತ ವಿಷಯಂಗಳ ಮುಟ್ಟಿ |ಯಾತಕೆ ವೈರಾಗ್ಯದ ಮಾತು | ಮಾತಿನಂತೆ ನಡೆದರಾಯಿತು 2 ನಾನು ದೊಡ್ಡವ ನನ್ನವರೆಂದು | ಜ್ಞಾನ ಗರ್ವದ ಮನೆಗೆ ಬಂದು | ಜ್ಞಾನಬೋಧನ ಪ್ರಭುವ ಕೂಡದೆ ದೀನನಾಗಿ ಬಳಲುವದೇನೊ 3
--------------
ಜ್ಞಾನಬೋದಕರು
ಉಗಾಭೋಗ ಪರಮಪುರುಷ ಕೇಳು ಒರೆದ ಮಾತಿಗೆ ನಾನು ನೆರೆ ತಪ್ಪುವನಲ್ಲ ವಂಚನೆ ಲೇಶವಿಲ್ಲ ಉರುದೈವ ವ್ಯಾಪಾರಕ್ಕೇನ ಮಾಡಲಿ ನಾನು ಸರ್ವವು ನಿನಗೆಂದು ಒಪ್ಪಿಸಿಹೆನಲ್ಲ ನರಕವಾಸಕೆ ನಾನು ಅಂಜÀುವನಲ್ಲವು ಮರಣಪಾಶಕೆಯಿನ್ನು ಅಂಜುವ ನಾನಲ್ಲ ಸರ್ವಸ್ವ ಹೋದರೂ ಚಿಂತೆ ಎನಗಿಲ್ಲ ಥರಥರ ಅಂಜುವೆ ನೊಂದೆ ವಿಷಯಕ್ಕೆ ಅರಿಯಲು ಅನೃತಕ್ಕೆ ಅಂಜುವೆ ನಾನಿನ್ನು ಸಿರಿ ಪರಾಕ್ರಮ ಶೌರ್ಯ ಇವುಗಳಿಂದಲಿ ಕೂಡಿ ಗರುವಪಡುತ ನಾನು ಮದಾಂಧನಾಗಿದ್ದೆ ಉರು ಶಿಕ್ಷೆ ಎನಗಿತ್ತು ಉದ್ಧಾರ ಮಾಡಿದೆ ಕುರುಡಗೆ ನೇತ್ರವು ದೊರೆತಂತೆ ಆಯಿತು ಪರಮ ಭಕ್ತನು ಆತನೆ ಪ್ರಹ್ಲಾದನು ಪರಿ ಪೀಡೆಗೆ ಗುರಿಯಾಗಿದ್ದರು ನಿನ್ನ ಸ್ಮರಿಸಿ ತಾನುತ್ತಮ ಗತಿಯನ್ನು ಪಡೆದನು ಸಿರಿಮದ ಕಳೆದೆನ್ನುನುದ್ಧಾರ ಮಾಡಿದೆ ಪರಮಪುರುಷ ನಿನಗೆ ಪ್ರಣಾಮ ಮಾಡುವೆ ಕರಿಗಿರೀಶನೆ ಕರುಣಿ ಕಾಯಬೇಕೆನ್ನನು
--------------
ವರಾವಾಣಿರಾಮರಾಯದಾಸರು
ಜ್ಞಾನಿಗಳು ತಪ್ಪುವರೆ ಕೊಟ್ಟ ವಚನ ಪ್ರಾಣಹೋದರೂ ಭಾಷೆ ಕೊನೆಗಾಣೋತನಕ ಪ ಖ್ಯಾತಿವಂತ ನಳರಾಜ ಸೋತ ರಾಜ್ಯಾಕೆಂದು ಮಾತಿಗಾಗಿಯೆ ತಾಂ ಪೋದ ವನವಾಸ ಮಾತುಳುಹಿಕೊಳ್ಳಲ್ಕೆ ಸತ್ಯವಂತ್ಹರಿಶ್ಚಂದ್ರ ನೀತಿಯಿಂ ತಾ ಕಾಯ್ದ ಸುಡುಗಾಡವ 1 ವಾಮನಮೂರುತಿಗೆ ಭೂಮಿ ಮೂರಡಿಯಂ ಭೂಮಿಪ ಬಲಿಚಕ್ರಿ ಪ್ರೇಮದಿಂದಿತ್ತಿರಲು ಸ್ವಾಮಿ ತಾಂ ಪರಿಕಿಸಲಿ ಭೂಮಿ ಈರಡಿಗೈಯೆ ಸ್ವಾಮಿ ಮಿಕ್ಕಾದಡಿಗೆ ಪ್ರೇಮದಿತ್ತ ಶಿರವ 2 ನಾರಿಗೆ ಪಿತನ್ವೊಚನ ಮೀರಲಾಗದುಯೆನುತ ನಾರಿಅನುಜರಿಂದ್ವಿಪಿನ ಸೇರಿದೆಯೊ ಶ್ರೀರಾಮ ಆರುಳಿಯ ಬಲ್ಲರೈ ಮೀರಿ ನಿಮ್ಮಾಜ್ಞೆಯನು ಭೂರಿ ಕರುಣದಿ ನೀನೆ ಪಾರುಮಾಡೆನ್ನ 3
--------------
ರಾಮದಾಸರು
ತಂದೆ ನಿನ್ನೊಲುಮೆಯೊಂದೆ ಎನ್ನ ಬಯಕೆ ಪ ಬಂದ ಕಷ್ಟಗಳೆಲ್ಲ ಎನ್ನಭ್ಯುದಯಕೆ ಅ.ಪ ಆಸೂರಿಯಾದರೂ ಈ ಸೂರಿಯಾದರೂ ಏಸೂರಿಗ್ಹೋದರೂ ವಾಸಿಯಿಲ್ಲ ಕೂಸುಗಳ ಪಡೆದರೂ ಆಸೆಗಳ ತೋರಿದರೂ ಹೇಸಿಕೆ ಬೇಳಲೆದರೂ ಲೇಸಾಗಲಿಲ್ಲ 1 ಈ ವೂರಿನೈವತ್ತು ಆ ವೂರಿನೈವತ್ತು ದೇವರ್ಕಳಿಗೆ ನಾಮ ಹರಕೆ ಹೊತ್ತು ಬೇವಿನಲಿ ಸಿಹಿಯ ನೀನೀವುದೆಂದತ್ತತ್ತು ಜೀವಿತವು ಬರಿದಾಯ್ತ ಬಾಧಿಸುವುದೈಮುಪ್ಪು 2 ತಂದೆ ಗೋವಿಂದನಯ್ಯ ಒಂದುನೂರ್ವಂದನೆಯ ಇಂದರ್ಪಿಸುವೆನಯ್ಯ ಕೈಹಿಡಿಯಯ್ಯ ಕುಂದ ಕಳೆಗಾಣಿಸಯ್ಯ ಬಂಧನವ ಬಿಡಿಸಯ್ಯ ಇಂದಿರಾನಂದ ಮಾಂಗಿರಿಯ ರಂಗಯ್ಯ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾಡಿದರಿಲ್ಲವೋ ಪ ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ ಘಾಸಿ ಮಾಡಿದರಿಲ್ಲ 1 ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ 2 ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ 3 ಪರ ಊರಿಗೆ ಹೋದರಿಲ್ಲ ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ 4 ವಾತಸುತನ ಕೋಣೆ ಲಕ್ಷ್ಮೀಶನು ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ 5
--------------
ಕವಿ ಪರಮದೇವದಾಸರು
ಮಾನಭಂಗವಮಾರಿ ಮೇಲುಪಚಾರವ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಏನ ಮಾಡಿದರಿಲ್ಲಿ ಇರಬಾರದಯ್ಯ ಪ.ಕುಂದುಗಳನಾಡಿ ಕುಚೋದ್ಯಗಳನೆ ಮಾಡಿಕಂದ ಬಾಯೆಂದು ಬಣ್ಣಿಸಿ ಕರೆಯಲುಹಿಂದೆ ಮುಮ್ಮೊಳೆಯಿಟ್ಟು ಮುಂದೆ ಬಣ್ಣಿಸಿ ಕರೆದುಮುಂದಲೆಯನು ಕೊಯ್ದು ಮಂಡೆಗೆ ಹೂವ ಮುಡಿಸಿದಂತೆ 1ನಗಗೇಡಿ ಮಾಡಿ ನಾಲುವರೊಳಗೆ ಕೈಯಮುಗಿವೆ ಬಾಯೆಂದು ಬಣ್ಣಿಸಿ ಕರೆಯಲುಮಿಗಿಲಾದ ವಸ್ತ್ರಭೂಷಣವಿತ್ತು ಮನ್ನಿಸಲುತುದಿಮೂಗ ಕೊಯ್ದು ಚಿನ್ನದ ಮೂಗನಿಟ್ಟಂತೆ 2ಆರ್ಥ ಹೋದರು ಪ್ರಾಣ ಹೋದರೂಮಾನವ್ಯರ್ಥವಾಗದ ಹಾಗೆ ಕಾಯಬೇಕುಕರ್ತೃ ಶ್ರೀಹರಿ ನಮ್ಮ ಪುರಂದರವಿಠಲನಭಕ್ತರಿಲ್ಲದ ಸ್ಥಳ ಬಿಡಬೇಕು ಹರಿಯೆ 3
--------------
ಪುರಂದರದಾಸರು