ಕಾಣಿ ಖೂನ
ಕಂಡ ಮ್ಯಾಲ ಖಂಡ ಮಾಡಿಕೊಂಬುದೆ ಸುಜ್ಞಾನ ಧ್ರುವ
ಕಾಣುವನು ಕಾಣಿಯೇನಾಗಿದೊ ಪ್ರಾಣಿ
ಕಾಣದೆ ಹೋದರನೇಕ ಜನ್ಮ ನಾನಾಯೋನಿ 1
ಕಾಣುವನ ಸ್ಥಾನ ಕಾಣದಿಹುದೇನ
ಜ್ಞಾನಗುರುವಿನ ಕೈಯ ಕೇಳಿಕೊ ನೀ ಖೂನ 2
ಕಂಡು ಕಾಂಬುವನ ಅಖಂಡ ಮಾಡೋಧ್ಯಾನ
ಪಿಂಡ ಬ್ರಹ್ಮಾಂಡಕ್ಕೆ ಇದೆ ವಸ್ತು ನಿಜಘನ 3
ಕಾಣುವನ ಕೂಡಿ ಸ್ವಾನುಭವ ಮಾಡಿ
ದೀನ ಮಹಿಪತಿಗಿದೆ ಘನ ಸುಖನೋಡಿ4