ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ನೋಡಿರೋ ನಿಜನೋಡಿರೋ ಧ್ರುವ ನೋಡಿನೋಡಿ ನೋಡಿ ನೋಡುದರೊಳು ಕೂಡಿ ನೋಡುವದೇನೆಂದು ನೋಡಿ ನೋಡಿದ ಮ್ಯಾಲಿನ್ನು ಮೂಡಿಬಂದರ ಘನ ನೋಡುವದೇ ಖೂನ ಮಾಡಿ ಮಾಡಿದ ಮಾಟವು ಕೂಡಿಬಂದರೆ ಕೈಯ ನಾಡಗೂಡ ಹೇಳಬ್ಯಾಡಿ ಗೂಢ ಗುಹ್ಯದ ಮಾತು ಒಡೆದು ಹೇಳುವದಲ್ಲಾ ನೋಡಿ ನಿಮ್ಮೊಳು ಬೆರೆದಾಡಿ 1 ಓದಿದರೋದಬೇಕಿದೊಂದೇ ಅಕ್ಷರ ಭೇದಿಸುವಂತೆ ಬ್ರಹ್ಮಾಂಡ ಇದೇ ಸಾಧಿಸಿನ್ನು ಮೂಲವ ತಿಳಿಯದೆ ಓದುವದ್ಯಾಕೆ ಉದ್ದಂಡ ಹಾದಿ ತಿಳಿಯದಿದ್ದರೆ ಹೇಳಿಕೊಡುವನು ಸದ್ಗುರು ಘನಪ್ರಪಂಚ ಭೋದಿಸಿ ಬ್ರಹ್ಮಾನುಸಂಧಾನದ ಸುಖ ಉದಯ ಮಾಡುವ ಅಖಂಡ 2 ನಾನ್ಯ ಪಂಥವೆಂಬ ಮಂತ್ರದನುಭವ ಚನ್ನಾಗ್ಯಾಗಬೇಕು ಖೂನ ಇನ್ನೊಂದು ಬ್ಯಾರೆಂಬ ಭಿನ್ನವಳಿದ ಮ್ಯಾಲೆ ತನ್ನೊಳಾಯಿತು ಸಮ್ಯಕಙÁ್ಞನ ಧನ್ಯ ಧನ್ಯ ಧನ್ಯ ಧನ್ಯಗೈಸುವದಿದು ಕಣ್ಣಾರೆ ಕಾಂಬೊ ಸಾಧನ ಉನ್ಮತವಾಗದೆ ಸನ್ಮತದೋರದು ಇನ್ನೊಬ್ಬರ ಕೇಳುವದೇನ 3 ಸರ್ವಮಿದಂ ಖಲು ಬ್ರಹ್ಮವೆಂಬುವ ಮಾತು ದೋರ್ವಾಂಗೆ ನೆಲೆಗೊಳಬೇಕು ಸರ್ವ ಸಾಕ್ಷಿ ಸರ್ವಾಧಾರವು ತಿಳಿಯದೆ ಗರ್ವಿತಲ್ಯಾಡುವ ಮಾತು ಹೋತು ಗುರ್ವಿನಂಘ್ರಿಗಿನ್ನು ಗುರುತವ ಕೇಳದೆ ಮವ್ರ್ಹಿನೊಳೀಹುದು ಮುಸುಕು ನಿರ್ವಿಕಲ್ಪನ ನಿಜ ಸ್ಮರಿಸುವಾಂಗೆ ಕಣ್ಣ ದೆರ್ವದಿದೊಂದೇ ಸಾಕು 4 ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಎಂದು ಗುರುವಿಗೆ ಕೇಳಿ ನಿಜ ವಂದ ದೇಹದ ಒಳಗಿಹ್ಯ ದ್ಯಾವರ ತಿಳಿದರ ಜನ್ಮಕೆ ಬಂದುದು ಚಂದ ಸೋಹ್ಯ ಸೊನ್ನೆಯ ಗುಹ್ಯವ ತಿಳಿದರ ಭವ ಮೂಲದಿಂದ ಬಾಹ್ಯಾಂತ್ರ ಪರಿಪೂರ್ಣ ಭಾಸುತಲ್ಯದೆ ಮಹಿಪತಿಗಿದೆ ಬ್ರಹ್ಮಾನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾನಧರ್ಮವ ಮಾಡಿ ಸುಖಯಾಗು ಮನವೆ ಪ ಹೀನ ವೃತ್ತಿಯಲಿ ನೀ ಕೆಡಬೇಡ ಮನವೆ ಅ ಎಕ್ಕನಾತಿ ಯಲ್ಲಮ್ಮ ಮಾರಿ ದುರ್ಗಿ ಚೌಡಿಯಅಕ್ಕರಿಂದಲಿ ಪೂಜೆ ಮಾಡಲೇಕೆಗಕ್ಕನೆಯೆ ಯಮನ ದೂತರೆಳೆದೊಯ್ಯುವಾಗಶಕ್ತೇರು ಬಿಡಿಸಿಕೊಂಡಾರೇನೊ ಮರುಳೆ 1 ಸಂಭ್ರಮದಲಿ ಒಂದ್ಹೊತ್ತು ನೇಮದೊಳಗಿದ್ದುತಂಬಿಟ್ಟಿನಾ ದೀಪ ಹೊರಲೇತಕೆಕೊಂಬು ಹೋತು ಕುರಿ ಕೋಣಗಳನ್ನು ಬಲಿಗೊಂಬದೊಂಬಿ ದೈವಗಳ ಭಜಿಸದಿರು ಮನವೆ2 ಚಿಗುರೆಲೆ ಬೇವಿನ ಸೊಪ್ಪುಗಳ ನಾರಸೀರೆಬಗೆಬಗೆಯಿಂದ ಶೃಂಗಾರ ಮಾಡಿನೆಗೆನೆಗೆದಾಡುತ ಕುಣಿಯುತಿರೆ ನಿನಗಿನ್ನುಮಿಗಿಲಾದ ಮುಕ್ತಿಯುಂಟೇ ಹುಚ್ಚು ಮನವೆ 3 ದಾನಧರ್ಮ ಪರೋಪಕಾರವ ಮಾಡುದೀನನಾಗಿ ನೀ ಕೆಡಬೇಡವೊಜ್ಞಾನವಿಲ್ಲದೆ ಹೀನ ದೈವವ ಭಜಿಸಿದರೆಏನುಂಟು ನಿನಗಿನ್ನು ಎಲೆ ಹುಚ್ಚು ಮನವೆ 4 ನರಲೋಕದಲಿ ಯಮನ ಬಾಧೆಯನು ಕಳೆಯಲುವರ ಪುಣ್ಯ ಕಥೆಗಳನು ಕೇಳುತಲಿಸಿರಿ ಕಾಗಿನೆಲೆಯಾದಿ ಕೇಶವನ ನೆರೆ ನಂಬಿಸ್ಥಿರ ಪದವಿಯನು ಪಡೆ ಹುಚ್ಚು ಮನವೆ5
--------------
ಕನಕದಾಸ
ಘಾತಕರಿನ್ನೇಕೆ ಪರಮಾರ್ಥ ಶ್ರವಣನೀತಿವಂತರೆ ನಿಮಗೆ ಪರನಿಂದೆ ಏಕೆ ? ಪ.ಕೋತಿಗಂದಣವೇಕನಾಥನಿಗೆ ಮುನಿಸೇಕೆ ?ಹೋತು ಕಾಳಗವಾಡೆ ಖ್ಯಾತಿಯೇಕೆ ?ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ?ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ? 1ದಯವಂತನಲ್ಲದಾ ದೊರೆಯ ಸೇವೆಯು ಏಕೆ ?ಭಯವು ಉಳ್ಳವಗೆ ರಣರಂಗವೇಕೆ ?ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆವ್ಯಯವಾದ ಧನಕಿನ್ನು ಚಿಂತೆಯೇಕೆ ? 2ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆಬಲ್ಲಧಿಕ ಜ್ಞಾನಿಗೆ ದ್ವೇಷವೇಕೆ ?ಚೆಲ್ವ ಶ್ರೀಪುರಂದರ ವಿಠಲನ ದಯವಿರಲುಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ? 3
--------------
ಪುರಂದರದಾಸರು