ಅ
ಕೇಳ್ ಕೇಳೆಲೊ ತತ್ವಜ್ಞಾನ
ನಿನಗೆ ಬೋಧಿಸುವೆ ನಾ ಪ
ವಾಹನ ನಾಟಕ ದರುಶನ
ಹೋಟಲೊಳಗೆ ಸುಭೋಜನ ಇದೇ ಪೀಯೂಷಪಾನ 1
ವೇಶ್ಯಾಲಯ ಪ್ರವೇಶಿಸುವದೆ ಘುನ
ಭಂಜನ 2
ಹರಿದಿನ ಮರುದಿನ ಇರುಳು ಹಗಲು ಉಂಬನ
ನರನ ಜನ್ಮವೆ ಬಲು ಪಾವನ ಮಹಾಪಾಪನಾಶನ 3
ಸೋಪುಲೇಪನ ಕ್ರಾಫು ಬಿಡೋಣ
ನಾಪಿತ ಕಾರ್ಯ ಕೈಗೊಳ್ಳೋಣ | ಇದೆ ವೇದಾಧ್ಯಯನ 4
ಸೋಡಾ ಪಾನ ಬೀಡಿ ಸೇದೋಣ
ಭಂಜನ 5
ಕುಲದಭಿಮಾನ ಕಳೆದನುದಿನ
ನಳದೊಳಗಿನ ಜಲಸ್ನಾನ ಮಹಕಲುಷ ನಾಶನ 6
ಈ ಕಲಿ ಬೋಧೆ ನಿರಾಕರಿಸುವವರಿಗೆ
ಶ್ರೀಕರಶ್ಯಾಮಸುಂದರನ ದಿವ್ಯಾನಂದ ಭವನ 7