ಒಬ್ಬರ ಮಾತ್ಯಾಕೆ ನಾಲಗೆ ನೀನು
ಉಬ್ಬದೆ ಸುಮ್ಮನಿರು ನಾಲಗೆ ಪ
ಮಬ್ಬಿನಿಂದ ನೀ ಒಬ್ಬರ ಮಾತಾಡಿ
ಕೊಬ್ಬನಿಂ ಕೆಡಬೇಡ ನಾಲಗೆ ಅ.ಪ
ಮಂದಿ ಮಾತಾಡಲು ನಾಲಗೆ ನಿನಗೆ
ಬಂದ ಭಾಗ್ಯವೇನು ನಾಲಗೆ
ಒಂದು ಅರಿಯದೆ ಮನಬಂದಂತೆ ಮಾತಾಡಿ
ಅಂದಗೆಡಲಿ ಬ್ಯಾಡ ನಾಲಗೆ 1
ನಿಂದೆಯಾಡಬೇಡ ನಾಲಗೆ ನೀನು
ಕುಂದುವಡೆಯ ಬೇಡ ನಾಲಗೆ
ಒಂದಿನ್ಹೋಗ್ವುದು ನಿನಗೆಂದಿಗೆ ತಪ್ಪದು
ಮುಂದಿನ ಸುಖ ನೋಡು ನಾಲಗೆ 2
ಸತ್ಯ ತಪ್ಪಬೇಡ ನಾಲಗೆ ನೀನ
ಸತ್ಯ ನುಡಿಯ ಬೇಡ ನಾಲಗೆ
ಮೃತ್ಯುಗೀಡಾಗ ಬ್ಯಾಡ ನಾಲಗೆ 3
ಸುಳ್ಳನಾಡಬೇಡ ನಾಲಗೆ ಸದಾ
ಒಳ್ಳೆ ಮಾತಾಡು ಕಂಡ್ಯ ನಾಲಗೆ
ಸುಳ್ಳು ಈ ಜಗಕೆ ಮಳ್ಳನಾಗಿ ಯಮ
ಕೊಳ್ಳಕೆ ಬೀಳ ಬ್ಯಾಡ ನಾಲಗೆ 4
ಹಾಳುಗೋಜ್ಯಾಕೆ ಕಂಡ್ಯ ನಾಲಗೆ ಕಾಲ
ಹೇಳಿ ಬರದು ನಿನಗೆ ನಾಲಗೆ
ಶೀಲಮನಸಿನಿಂದ ಪಾಲ ಶ್ರೀರಾಮಪಾದ
ಕಾಲತ್ರಂiÀiದಿ ನೆನೆ ನಾಲಗೆ 5