ಚಂದಿರವದನೆಯ ತವ ಸನ್ನಿಧಿಗೂ
ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ
ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ
ನನ್ನ ಕರೆಗೆ ಓ ಎನ್ನುವರಿಲ್ಲ
ನನ್ನಲ್ಲಿ ಕನಿಕರ ತೋರುವರಿಲ್ಲ
ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ
ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1
ಅಪ್ಪನು ನಿನ್ನ ಮಾತೊಪ್ಪುವನಮ್ಮ
ತಪ್ಪನು ಮನ್ನಿಸಲೊಪ್ಪುವನಮ್ಮಾ
ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ
ನಪ್ಪಣೆಗೊಡಿಸು ರಂಗಪ್ಪನನೊಲಿಸು2
ಶೌರಿಯ ಕೃಪೆಯವತಾರೆ ನೀನೆಂಬುದ
ನಾರದನೆಲ್ಲೆಡೆ ಸಾರುತಲಿಹನು
ಮಾರಜನಕ ಮಾಂಗಿರಿರಂಗನು ನಿನ್ನ
ಕೋರಿಕೆಗನುಮತಿ ತೋರುವನಮ್ಮಾ 3