ಹಿಡಿದ ಕೈಬಿಡಬೇಡವೋ ರಾಮಾ ಪ
ಹಿಡಿದ ಕೈ ಬಿಡಬೇಡ ಕಡಲವಾಸವು ಬೇಡ
ತಡಿಗೆ ತಳೆಯದಿರಬೇಡ ಕಡೆಗಣ್ಣಿಡ ಬೇಡ ಅ.ಪ
ನುಡಿ ಕೇಳದೆನಬೇಡ ಅಡಿದೋರದಿರ ಬೇಡ
ಕುಡುಕ ಹೋಗೆನಬೇಡ ನುಡಿಸದಿರ ಬೇಡ
ಕೊಡು ಕೊಡೆನ್ನಿಸಬೇಡ | ಪಡೆಯುವಾಸೆಯು ಬೇಡ
ದೃಢವಾಗಿ ನಿನ್ನಡಿಯ ಹಿಡಿಸದಿರ ಬೇಡ 1
ಬಿಗುಮಾನ ಬೇಡಯ್ಯ ನಗುಮೊಗವ ತೋರಯ್ಯ
ಬಗೆಯರಿತು ನಡೆಸಯ್ಯ ಸುಗತಿದೋರಯ್ಯ
ಬಿಗಿಹಿಡಿದ ಕೈಯ ಜಗುಳಿಸಲು ಬೇಡಯ್ಯ
ನಿಗಮ ವಂದಿತಜೀಯ ಮಾಂಗಿರಿಯ ರಂಗಯ್ಯ2