ಕಾಲ ಬಂದಿತೋ
ಬಂದ ಭವದೊಳು ಚಿಂತೆಯೊಳಗೆ ದಿನ ಸಂದಿತು ಪ
ತುಪ್ಪ ಪಣಕೆ ಸೇರು ಉಪ್ಪೆಂಟು ಸಿದ್ದೆಯು
ಮುಪ್ಪಾಗ ಕೊಂದೆ ಕೊಳಗಬತ್ತ
ಸೊಪ್ಪ ಪಣಕೆ ಮಾರುವುದು ಅಚ್ಚೇರು 1
ವ್ಯಾಪಾರ ಸಾಪಾರ ತುಟ್ಟಿಸಿದರು ಕೊಳ್ಳ
ಲಾಪರೆ ಫಣವೊಂದೆ ಕಟ್ಟಿಲ್ಲ
ರೂಪಾಯಿ ಕೊಡೆ ಪುಲಿಚರಮ
ಪಾಪವು ಸುಲತಾಗಿ ಪಣವ ಕೊಡೆಂಬರು 2
ದುಡ್ಡು ಕೊಡಲು ಬೇಡ ಬೈಯುತ ಆನೆ
ಗೂಡಿನ (ಆನೆಗೊಂದಿ) ದುಡ್ಡತಾರೆಂಬರು
ದೊಡ್ಡ ಮೊಳೆ ಪಣವಿದು ಸಣ್ಣ ಮೊಳೆಯಿಂಗಿ ?
ಹೆಡ್ಡ ಹೋಗೆಂದದ್ದ ಬಿಸುಟರು ಫಣವ 3
ತಪ್ಪಿ ಹೇಳುವೆನೆ ನಮ್ಮಪ್ಪ ದುರ್ಭಿಕ್ಷವು
ಎಪ್ಪತ್ತು ವರುಷ ಕೊದಗಿ ಬಂತು
ಇಪ್ಪತ್ತು ವರುಷಕೀಕಾಲ ಬಂದಿದ್ದರೆ
ಕನಿಷ್ಟಕ್ಕೆ ಗಣಿಸಿ ಸುಕ್ಷಾಮವ ಮರೆವೆನು 4
ಧಾರಣೆ ಪಾರಣೆ ಶಿವರಾತ್ರಿ ಹರಿದಿನ
ಓರಂತೆ ಬಡವಗೆ ನೆಲೆಯಾಯಿತು
ಕ್ಷೀರಾಬ್ದಿ ಶಯನ ಲಕ್ಷ್ಮೀನಾರಾಯಣನು ತನ್ನ
ಸೇರಿದ ಜನರ ಕಣ್ಣಲಿ ನೋಡುತೊಲಿದ 5