ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎತ್ತಿಕೊಂಡ್ಹೋಗುವೆನೆ ಈ ಕೂಸಿನ್ನ ಎತ್ತಿಕೊಂಡ್ಹೋಗುವೆನೆ ಪ ಎತ್ತಿಕೊಂಡ್ಹೋಗುವೆ ಮುತ್ತಿನಂಥಾ ಕೂಸುಹತ್ತಲಿ ಬರುವುದು ಚಿತ್ತಬಿಟ್ಟಗಲದು ಅ.ಪ. ಗುಂಡು ಬಿಂದಲಿ ಕೈಯೊಳು ಮುತ್ತಿನ ದಿವ್ಯ ಚೆಂಡುಪಿಡಿದ ಬಿಡನುಹಿಂಡು ಬಾಲರ ಕೂಡಿಕೊಂಡು ಆಡುವ ಕೂಸುಇಂಥ ಕಂದನ್ನ ಪಡೆದಿಯೇನೇ ಗೋಪಮ್ಮ ನೀ 1 ನೀಲ ಮಾಣಿಕ ಗೆಜ್ಜೆಯುಭಾಳ ಕಡೆಗೆ ಪೋಗಿ ಲೋಲಾಡುವ ದೃಷ್ಟಿಮಾಲೆಯನ್ಹಾಕಿ ತಾರೆ ಗೋಪಮ್ಮ 2 ಅರಳೆಲೆನಿಟ್ಟಿಹದು ಮುಂದಲೆಯಲ್ಲಿ ಜರದ ಕುಂಚಿಗೆ ಇಹುದುತೆರದ ಕಣ್ಣು ಮುಚ್ಚಿ ತೆರೆದು ನೋಡುತಲಿದ್ದಎರೆದು ಮಲಗಿಸಿದೆಯೇನೆ ಗೋಪಮ್ಮ ನೀ 3 ಎಷ್ಟು ಜನ್ಮದ ಪುಣ್ಯವು ಬಂದೊದಗೀತ ಪುಟ್ಟಿದೆ ಇಂಥ ಕೂಸುಪುಟ್ಟ ಬಾಲಗೆ ಉಮ್ಮಕೊಟ್ಟು ಬಟ್ಟಲಿ ನಾನುದೃಷ್ಟಿಯು ಮುರಿಯುವೆನೇ ಗೋಪಮ್ಮ ನಾ 4 ಮಂದಿ ಕೈಯಲಿ ಕೊಡೆನೆ ಈ ಕೂಸಿನ್ನ ತಂದು ಕೊಡುವೆನೆ ನಾನುಇಂದಿರೇಶನ ಬಿಟ್ಟು ನಿಂದಲಾರದ ಮನಇಂಥ ಕಂದನ್ನ ಪಡೆದಿಹೆನೆ ಗೋಪಮ್ಮ ನೀ 5
--------------
ಇಂದಿರೇಶರು
ಕಂಡು ನಮಿಸಿದೆ ಸತ್ಯಬೋಧ ಮುನಿಯ ಮಂಡೆ ಬಾಗುತ ದೇಹ ದಂಡವಿಕ್ಕುತಲಿ ಪ. ಭವ್ಯ ಬೃಂದಾವನದಿ ವೈಭವದಿ ಮೆರೆವವರ ಸವ್ಯಸಾಚಿಯ ಸಖನ ಪ್ರಿಯ ಪಾತ್ರರ ದಿವ್ಯ ಕೂರ್ಮಾಸನದಿ ಕುಳಿತು ತಪಚರಿಸುವರ ಅವ್ಯಯಾತ್ಮನ ಚರಣ ಧ್ಯಾನ ಮಾಳ್ಪವರ 1 ವಿಷವಿಡಲು ಪಾಪಿಗಳು ರಾಮಗರ್ಪಿಸಿ ಭುಜಿಸೆ ನಿಶಿಯಲ್ಲಿ ನಿದ್ರೆ ಜೈಸುತ ನಿತ್ಯದಲಿ ಹಸನಾಗಿ ದೇವತಾರ್ಚನೆ ಭೋಜನವಗೈಯೆ ದೂಷಿಸಿದ ಕುಜನರಿಗೆ ರಾತ್ರೆ ಸೂರ್ಯನ ತೋರ್ದ 2 ಕಾಶಿಗ್ಹೋಗುವೆನೆಂಬ ಆಸೆ ಪೂರೈಸುವೊಡೆ ತಾ ಸ್ವಪ್ನದಲಿ ಬಂದು ಜಾಹ್ನವಿಯು ಪೇಳೆ ರಸರಹಿತವಾದ ವೃಕ್ಷದಿ ಗಂಗೆಯನೆ ತರಿಸಿ ತಾ ಸ್ನಾನಗೈದು ಭಾಗೀರಥಿಯ ಪೂಜಿಸಿದ3 ಪೇಳಲಳವಲ್ಲದಿಹ ಬಹಳ ಕೌತುಕ ಮಹಿಮೆ ಕಾಲಕಾಲಕೆ ತೋರಿ ಭಕ್ತರನು ಕಾಯ್ದು ಮೇಲಾದ ಮಧ್ವ ಶಾಸ್ತ್ರಾರ್ಣವದಿ ಈಜುತಲಿ ಲೀಲೆಯಿಂದಲಿ ಮಾಯ್ಗಳನೆ ಗೆದ್ದ ಮಹಿಮ 4 ಪ್ರತಿವರ್ಷ ಪಾಲ್ಗುಣದಿ ದ್ವಿತೀಯ ಪಕ್ಷದಿ ದ್ವಿತೀಯ ತಿಥಿಯಲ್ಲಿ ದಿವ್ಯ ಉತ್ಸವ ಕೊಳುತ ಸತತ ಈ ಸವಣೂರು ಕ್ಷೇತ್ರದಲಿ ನೆಲಸುತಲಿ ಚ್ಯುತರಹಿತ ಗೋಪಾಲಕೃಷ್ಣವಿಠ್ಠಲನ ಭಜಿಪೆ5
--------------
ಅಂಬಾಬಾಯಿ
ದೂರು ಯಾತಕ್ಕೆ ತರಲ್ಯಮ್ಮಾ | ಯಶೋದಮ್ಮ || ವಾರಿಜ ಮುಖಿಯರು ಶೇರದೆ ಹೇಳ್ವರು ಪ ವಂದು ದಿನ ನಾ ಮನಿಯ ಬಿಟ್ಟು ಹೋಗುವೆನೆಯಲ್ಲ್ಯೊ | ಬಂದು ಹೇಳುವರೆಲ್ಲ ಕೇಳು ಗೋಕುಲದೊಳು | ಸಂದು ಸಂದನೆ ತಿರುಗಿ ಮಂದಗಮನಿಯರು | ಹೊಂದಿ ಒದಗಿ ಬಾಯಂದದ್ದು ನಿಜಮಾತು 1 ಯನ್ನ ಮಾತನ್ನು ಸುಳ್ಳಾದರೆ | ಗೋವಳ್ಹಾರೇ ಮನ್ನಿಸಿ ಬದಿಗೆ ಕರೆದುಕೇಳು | ಅವರಿಗೆ ಹೇಳು ಕನ್ಯೆಯರೆಲ್ಲಾ ಬಂದು ಬೆಣ್ಣೆಗಳ್ಳನೆಂದು ಕಣ್ಣಿಲಿ ನೋಡದೆಯನ್ನ ದಂಡಿಸುವರೇ2 ಪರರ ಮನೆಯೊಳಗಿರುವ ಮಡಿಕೆ ಪಾತ್ರೆ ನಿನಗ್ಯಾಕೆ | ಸ್ಥಿರ ಕ್ಷೀರಾಂ ಬುಧಿಶಯನನಾಗಿ | ಇರವದು ಆಗಿ | ಪುರದ ಸ್ತ್ರೀಯರು ಯಲ್ಲ ದೊರೆ ಹೆನ್ನೆ ವಿಠಲನೆಂದು ಮರೆತು ಹೇಳಲಿ ಬಹು ಸ್ಥಿರವಾಗಿ ಮಾಡುವರೇನೆ 3
--------------
ಹೆನ್ನೆರಂಗದಾಸರು
ರಮಾನುತ ಪಾದಪಲ್ಲವ ಶ್ರೀಕರ ಚರಣ ಸೇವಕರ ಸಂಗದೊಳಿರಿಸು ವಿಜಯರಾಯ ಪ ನಿಮ್ಹೊರತು ಪೊರೆವರನ್ಯರನು ನಾಕಾಣೆ ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ ಪಂಡಿತ ಪಾಮರರನು ಉದ್ಧಾರ ಮಾಡೆ ಕರುಣದಿಂದ ಸಕಲ ವೇದಗಳ ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ ಮಾಡಿದಿ ಪದಗಳ ಸಕಲರೂ ತಿಳಿವಂದದಿ 1 ನಿನ್ನವರಾದ ರಂಗ ಒಲಿದ ರಾಯರ ನೋಡು ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು ನಿನ್ನವನೆಂದೆನ್ನನು ಅವರಂತೆ ನೋಡದೆ ಎನ್ನ ಕೈ ಸಡಿಲ ಬಿಡುವದೇನೋ 2 ಎಂದಿಗಾದರು ನಿನ್ನ ದಾಸರ ಕರುಣದಿಂದ ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ ತಂದೆ ವಿಜಯ ರಾಮಚಂದ್ರವಿಠಲರಾಯನ ಹೊಂದುವ ಮಾರ್ಗವ ಬಂದು ತೋರಿಸಬೇಕೊ 3
--------------
ವಿಜಯ ರಾಮಚಂದ್ರವಿಠಲ