ಇದ್ದಿದ್ದೊಮ್ಮೆ ಇಂಥಾ ಕಷ್ಟ ಏನು ತಂದ್ಯೋ ಹರಿಯೆ
ಪೊರೆಯಬೇಕೆಂದು ನುತಿಸುವವಗೆ ಪ
ಮಧ್ಯಾಹ್ನಕ್ಕೆ ಮನೆಯ ಒಳಗೆ ಮುದ್ದಿಗೆ ಗತಿಯಿಲ್ಲಾ
ವಿದ್ಯಾರ್ಥಿಗಳು ಇಷ್ಟರು ಬಂದರೆ ಇಷ್ಟೂ ಅನ್ನವಿಲ್ಲಾ
ಎಂದು ಹೋಗುವೆನು ಎಲ್ಲಿಗೇನೆಂದರೆ ಎಲ್ಲಿ ಏನಿಲ್ಲಾ
ಬದ್ಧ ಕಂಕಣವ ಕಟ್ಟಿಕೊಂಡು ನಿನ್ನ ಪಾದವೆ ಗತಿ
ಯೆಂದಿರುವೆ ಇಷ್ಟು 1
ಭಿಕ್ಷಕೆ ಬಂದವರಿಗೆ ನೀಡಲು ಹಿಡಿ ಭತ್ತಕೆ ನೆಲೆಯಿಲ್ಲಾ
ಕುಕ್ಷುಂಬರರಾಗಿ ಗೃಹಕೆ ಬಂದವರಿಗೆ ಕೂಳಿಗೆ ಗತಿಯಿಲ್ಲಾ
ತುಚ್ಛ ಕುಬುದ್ಧಿ ತುಂಟರ ಕೂಡ ಉಪೇಕ್ಷೆ ಮಾಡ್ವರಲ್ಲಾ
ಲಕ್ಷ್ಮೀರಮಣ ಶ್ರೀ ರಘುಕುಲ ತಿಲಕ ನೀ ರಕ್ಷಕನೆಂದಾ
ಪೇಕ್ಷೆಯಲಿರುವನಿಗೆ 2
ಅತಿಥಿ ಆಭ್ಯಾಗತರು ಬಂದರೆ ಪೂಜಿಸೊ ಅಧಿಕಾರವು ಇಲ್ಲ
ಸುತರು ಹಿತರು ಕೂಡುಂಬುವ ಸಂತತ ಸುಖವು ಕಾಣಲಿಲ್ಲ
ಹಿತವರುದಾರಿಲ್ಲ
ಪತಿ 'ಹೊನ್ನೆ ವಿಠ್ಠಲ’
ಪರಮ ಪುರುಷ ಕೃಷ್ಣಾ 3