ಯಾವ ಸುಖ ಇದು ದಾವ ಸುಖ ಮನುಜ ಶರೀರದ್ದು ಪ
ನೋಯುತಲಿರುವುದು ಅ.ಪ
ಕೊಂಡ ದಾವ ಸುಖ ಇದು
ಹೇಯವಾಲದ ಭಾಂಡದ್ದಾವ ಸುಖ
ಕಾಯವೆನಿಸಿಕೊಂಡು ಸಾವುಕುಣಿಗೆ ಬಿದ್ದು
ಮಾಯವಾಗುತಲಿಹ್ಯದಾವ ಸುಖ 1
ಜಡಮತಿಶರೀರದ್ದು ದಾವ ಸುಖ ಇದು
ಕೆಡುವ ತನುವು ನಿಜ ದಾವ ಸುಖ
ಬುಡವು ಮೇಲಾಗಾಡಿ ಕಡೆಗೆ ಒಂದುದಿನ
ಮಡಿದು ಹೋಗುವುದುದಾವ ಸುಖ 2
ನೇಮವಲ್ಲೊಂದಿನ ದಾವ ಸುಖ
ಕಾಮಿತವನು ನೀಗಿ ಸ್ವಾಮಿ ಶ್ರೀರಾಮನ
ಪ್ರೇಮ ಸಂಪಾದಿಸಲಾಗ ಸುಖ 3