ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಯೆನ್ನೋ ಹರಿಯೆನ್ನೋ ಹರಿಯೆನ್ನೋ ಖೋಡಿ ಹರಿಯದಾಸರ ಸಿರಿಸಂಪದ ನೋಡಿ ಪ ಎರವಿನ ಸಿರಿಗೆ ನೀ ಮರುಳಾದಡಿ ಹರಿಯೆಂದು ನುಡಿಲಿಕ್ಕೆ ನೀನಗೇನು ಧಾಡಿ ಧರೆಯೊಳಾರಿಲ್ಲ್ಹರಿದಾಸರ ಜೋಡಿ ಮರುಳ ಯಮದೂತರಂಜಿ ಹೋಗುವರೋಡಿ 1 ಭವಚಕ್ರದೊಳುಬಿದ್ದು ಬೆಂಡಾದೆ ಕಾಗಿ ಅವನಿಸುಖ ನೀನಿನ್ನು ತಿಳಿವಲ್ಲಿ ಗೂಗಿ ಭವಹರನರ್ಚಿಸಿ ನೋಡೋ ದೃಢಮಾಗಿ ಭವತಾಪ ನಿನಗೆಂದಿಗಿರದೋ ನಿಜವಾಗಿ 2 ಮತಿಶೂನ್ಯನಾಗಧೋಗತಿ ಕಾಣಬೇಡೋ ಮತಿಯಿಂದ ನಿಜಸ್ಥಿತಿ ವಿಚಾರಮಾಡೋ ಕೃತಕೃತ್ಯರೆನಿಪ ಹರಿದಾಸರೊಳಾಡೋ ಪತಿತ ಶ್ರೀರಾಮನರಸಿ ಮುಕ್ತಿಯ ಕೂಡೋ 3
--------------
ರಾಮದಾಸರು