ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಹರಿಯೆನಲಿಕ್ಕೆ ಹೊತ್ತಿಲ್ಲ-ರಂಗಯ್ಯ |ಹರಿಹರಿಯೆನಲಿಕ್ಕೆ ಹೊತ್ತಿಲ್ಲ ಪಧಾರಣೆಯ ಮಾಡುವಾಗ ಪಾರಣೆಯ ಚಿಂತೆ |ದೂರಯಾತ್ರೆ ಮಾಡುವಾಗ ಧಾರಣೆಯ ಚಿಂತೆ 1ನಿತ್ಯಯಾತ್ರೆ ಮಾಡುವಾಗ ಪುತ್ರರ ಮೇಲಿನ ಚಿಂತೆ |ಎತ್ತ ನೋಡಿದರತ್ತ ಉದರದ ಚಿಂತೆ 2ಸ್ನಾನವನ್ನು ಮಾಡುವಾಗಮಾನಿನಿಮೇಲಿನ ಚಿಂತೆದಾನವನ್ನು ಕೊಡುವಾಗಧನದಮೇಲಿನ ಚಿಂತೆ3ದೇವತಾರ್ಚನೆ ಮಾಡುವಾಗ ಸಂಸಾರದ ಚಿಂತೆ-ಅ-|ದಾವಾಗ ನೋಡಿದರು ಪರರ ಕೇಡಿನ ಚಿಂತೆ 4ಗಂಗೆಯ ಮೀಯುವಾಗ ತಂಬಿಗೆ ಮೇಲಿನ ಚಿಂತೆ |ಸಂಗಡ ಬಂದವರೆಲ್ಲ ಹೋಗುವರೆಂಬ ಚಿಂತೆ 5ಡಂಭಕತನಕೆ ಸಿಕ್ಕಿ ಭಂಗವ ಪಡುವೆ ತಂದೆ |ಇಂಬನಿತ್ತು ರಕ್ಷಿಸೈ ಪುರಂದರವಿಠಲನೆ 6
--------------
ಪುರಂದರದಾಸರು