ವಿಸ್ತರಿಸಿ ಬರುವನೊ ರುಕ್ಮಿಣಿಗೆ ಹಸ್ತಕಳ ಕಳಹುವನೊಮಿತ್ರೆ ದ್ರೌಪತಿ ಸುಭದ್ರೆ ಮುಯ್ಯಾಒಯ್ಯೋ ವರ್ತಮಾನವೆಲ್ಲ ಅರುಹೋನು ವಿಸ್ತರಿಸಿ 1
ಹೇಳದೆ ಹೋಗುವನೊ ಅಥವಾ ಸುದ್ದಿತಿಳಿಯದೆ ಕಳುಹುವನೊಭಾಳ ಚರ್ಚೆಯ ಮಾತು ಭಾಮೆಯಕಿವಿಗೆ ಬೀಳದಂತೆ ಕಾಳಿ ಹಿಡಿಸುವನೊ2
ಮೊದಲಿಗೆ ಅರುಹುವನೊ ಅಥವಾಬೆದರದೆ ನಗುವನೊಮದಗಜಗಮನೆಯರ ಎದೆ ಧಿಗಿಲೆಂಬಂತೆಚದುರ ಚರ್ಚೆಯ ಡಂಕಿ ಹೊಯ್ಸುವನೊ 3
ಎಚ್ಚರ ಕಳಹುವನೊ ಅಥವಾನಿದ್ರೆ ಬೆಚ್ಚಲಿ ಹೋಗುವನೊಮತ್ತÀನೇತ್ರಿಯರ ಮನಕೆ ನಡುವಂತೆಚರ್ಚೆಮಾತಿನ ಭೇರಿ ಹೊಯ್ಸುವನೊ4
ದಾಸಿಯ ಕಳಹುವನೊ ಅಥವಾಕಂಡು ಹಾಸ್ಯವ ಮಾಡುವನೊಮೋಸಗೊಳಿಸಿ ಆಭಾಸ ಉಕ್ತಿಗಳಿಂದ ಆಕಾಶವಾಣಿಯಿಂದ ನುಡಿಸುವನೊ5
ಅರಿಯದೆ ಹೋಗುವನೊ ಅಥವಾಮೈಮರೆಯದೆ ನಗುವನೊಶ್ರೀಶರಾಮೇಶನರಸನ ಸತಿಯರ ಚರ್ಚಿಸಿ ಹರುಷಮಾಡಿ ಹರಿಯು ಬರುವನೊ 6