ಕೇಳಿದ್ಯಾ ಈ ಕೌತುಕ ಕೇಳಿದ್ಯಾ
ಕೇಳಿದ್ಯಾ ಕೌತುಕವನ್ನು ಈಗ ಪ
ಪೇಳುವೆ ನಾ ನಿಮಗಿನ್ನು ಆಹಾ
ಜಾರ ಚೋರ ಕೃಷ್ಣ ಅ.ಪ.
ಕರೆಯೆ ಬಂದಿಹನೊಬ್ಬ ಚೋರಾ ತನ್ನ
ಕಿರಿಯಯ್ಯನಂತೆ ಅಕ್ರೂರಾ
ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ
ಹಿರಿಯನೆಂದು ಕಾಲಿಗೊರಗೋರಾ
ರಾಮಕೃಷ್ಣರ ಭರದಿ ಅಪ್ಪಿಕೊಂಡು
ಮರುಳು ಮಾಡಿದ ಸುದ್ದೀ 1
ಸೋದರಮಾವನ ಮನೆಯೋಳ್ ಬೆಳ -
U್ಫದ ನಾಳಿನ ದಿನದೋಳ್ ಕೃಷ್ಣ
ಪೋದರೆ ನೆರೆದ ಜನರೋಳ್ ಆಹಾ
ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ
ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ 2
ಹುಟ್ಟಿದ ಸ್ಥಳವಂತೆ ಮಧುರೀ ಕಂಸ -
ನಟ್ಟುಳಿಗಾಗಿ ತಾ ಬೆದರೀ ಇ -
ಲ್ಲಿಟ್ಟಳಾತನ ತಂಗಿ ಚದುರೀ ತೋರಿ
ಕೊಟ್ಟರೆ ತನ್ನನು ಬೆದರೀ ಆಹಾ
ಇಷ್ಟು ಸ್ನೇಹವು ಶ್ರೀದವಿಠಲ ಮಾವನ
ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ 3