ಉಗಾಭೋಗ
ಪರಶು ಮುಟ್ಟಲು ಲೋಹ ಸ್ವರ್ಣವಾಗುವ ಪರಿ
ಸಿರಿ ಒಲಿಯೆ ದಾರಿದ್ರ್ಯ ಹತವಾಗಿ ಪೋಪಂತೆ
ಅರಸು ಮುಟ್ಟಲು ದಾಸಿ ವರನಾರಿ ಅಪ್ಪಂತೆ
ವಿರಜೆ ಮುಳುಗಲು ಜೀವ
ವಿರಜನಾಗುವ ತೆರದಿ ವರ ಸುಧಾಪಾನದಿ
ಜರೆ ಮರೆ ರೋಗಗಳು ಹರಿದ್ಹೋಗುವಂದದಿ
ಹರುಷದಿ ನಮಗಿನ್ನು ಗುರುವರ ದೊರಕಲು
ವರ ಪುಣ್ಯರಾಸಿಯಂತೆ ಪಾಪಿ ನಾನು ಹರಿಭಕ್ತನಾದೆ ಮುಂದೆ
ಕರುಣಾರ್ಣವ ಸುರತ ಜಯೇಶವಿಠಲ
ಸುರಿವ ಕರುಣ ನಿಶ್ಚಿಂತೆ