ನೀತಿವಂತನಾದ:
ನೀತಿ ವಂತನಾದ ನಿಗಮಗೋಚರ ದೇವ |
ಮಾತಿಗೆ ನಿಜಶೀಲ ಮಾತುಗಳಾಡಿ ಪ
ಕೂಸಿನ ಮೊಲೆಯವಳ | ಕೊಸರಿಮುತ್ತನೆ ಇಟ್ಟು |
ಚೂಶಿಯ ಮಾಡಿ ಬಲು ಘನವಾಗಿ ಮನಿಯೊಳು 1
ಚದಗತನದಿಯಲ್ಲ | ಚಲುವೆಯರೂಡಗೂಡಿ
ಅಧರಾಮೃತ ಸವಿದು ಆನಂದದಲಿ ಇನ್ನು 2
ನೀರಿಗೆ ಹೋಗುವಂಥಹ ನಿಜ ಸ್ತ್ರೀಯರನೆ ಕಂಡು
ತೋರಿವಟ್ಟಳ ಹಿಡಿದು ತುಟಿಯನೆ ಕಡಿದು 3
ಕೆಳದೆರು ಜಲದಲ್ಲಿ ಕ್ರೀಡೆನಾಡುವ ವೇಳೆ
ಕೆಳಗಿದ್ದ ಶೀರೆಗಳ ಕೊಂಡು ಮರವನೇರಿ 4
ಈ ಪರಿಚರ್ಯಗಳಷ್ಟು ತನ್ನಲಿದ್ದು
ಭೂಪ ಹೆನ್ನೆ ವಿಠಲ ಪೂಜಿತನಾÀನು 5