ಕುಟ್ಟಿ ಕೊಳ್ಳೊ ಮಾಣಿ ನಿನ್ನ ಹುಟ್ಟಿಸಿರುವ ದೈವಕೆ
ಹೊಟ್ಟೆ ತುಂಬ ಬಾಯಿಗಾನು ಬಿಟ್ಟೆನೆಂದ್ರೆ ಕ್ಷೀರವಿಲ್ಲ ಪ
ಕೊಟ್ಟು ಪಡೆಯಲಿಲ್ಲ ಮುನ್ನಹುಟ್ಟಿ ಪಡೆಯಲಿಲ್ಲ ಮುಂದೆ
ಹಟ್ಟಿಯೊಳಗಣಾಕಳೆಲ್ಲ ನಷ್ಟವಾಯ್ತು ರೋಗದಿಂದ 1
ಅತ್ತು ಸಾಯ ಬೇಡ ನೀನು ಎತ್ತಿ ಕೊಂಬರೊಬ್ಬರಿಲ್ಲ
ಭತ್ತವನ್ನು ಕುಟ್ಟಿ ನಾನು ತುತ್ತಮಾಡಿ ತಿನ್ನಿಸುವೆನು 2
ನೀರು ಕಾದು ಬಂತು ಬಿಸಿಯ ನೀರ ನೆರೆವೆನೀಗ ನಿನಗೆ
ಸಾರಿ ಮೊಲೆಯ ನೂಡಿ ನನ್ನ ಸೀರೆ ಸೆರಗಹಾಸಿ ಕೊಡುವೆ 3
ದೊಡ್ಡ ಕೂಸ ಕಾಣೆಯವಳು ಗುಡ್ಡೆ ಬಸವಿಯಾದಳೀಗ
ಚಡ್ಡೆಯಲ್ಲದೆ ಹೋಗುತಿಹಳು ಸಡ್ಡೆ ಮಾಡಳೆನ್ನಮಾತ 4
ಇಂತೆನುತ್ತ ಬಾಲಕನ್ನ ಸಂತವಿಟ್ಟು ನಾರಿ ಲಕ್ಷ್ಮೀ
ಕಾಂತ ಮಾಡ್ದ ಲೀಲೆಗಳನು ನಿಂತು ಪಾಡಿಪೋದಳಾಕೆ 5