ಒಟ್ಟು 11 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಡವ ಮಾಡಲಿ ಬೇಡ ಹಡೆದವ್ವ ಎ ನ್ನೊಡೆಯನನು ಹುಡುಕಿ ತಾರೆ ಪಿಡಿವೆ ಪಾದವ ಪ ತಡವ ಮಾಡದೆ ಪೊಡವಿಯೊಳು ಕಡು ಸಡಗರಾರ್ಯನ ಹುಡುಕಿ ತಂದರೆ ಹಡೆದು ನಿನ್ನ್ಹೆಸರಿಸಿವುವೆನೆನ್ನವ್ವ ಸರಿಮಾಡ್ವೆನವ್ವ ಅ.ಪ ಜೀವದರಸನ ಹಂಬಲೆನಗವ್ವ ಅತ್ಯಧಿಕವಾಗಿ ಕಾಯಸೊರಗಿ ಕ್ಷೀಣವಾಯ್ತೆವ್ವ ಪ್ರಾಯಬಂದರೆ ಸುಮ್ಮನೆ ಹೋಗುತಾದವ್ವ ಪ್ರಾಯಕ್ಕೆ ತಕ್ಕ ಚಾಯಗಾರ ಕಂಡೇನ್ಹೇಗವ್ವ ಕಾಯರಹಿತ ಕಾರುಣ್ಯನಿಧಿ ಮಾಯತಿಳಿಯುವರಿಲ್ಲ ಆತನ ದಿವ್ಯಚರಿತ ನೆನೆದು ನೆನೆದು ಬಾಯ ಬಿಡುವೆನೆ ಆಯತಾಂಬಕಿ 1 ವಸ್ತೊಡೆವೈಷ್ಟಿರಲು ಏನವ್ವ ಅತಿಶೋಭೆಯೆನಿಪ ಮುತ್ತುಯಿಲ್ಲದ ಮೋರೆಯಾಕವ್ವ ಹತ್ತಿರಕೆ ಬರಗೊಡರವ್ವಾ ಮುತ್ತೈದೆರೆಲ್ಲರು ಅತ್ತ ಇತ್ತೆಂದೆಳೆಯುತಿಹ್ಯರವ್ವ ಮತ್ತೆ ಬೇಡಲು ದೊರೆಯದಂಥ ಹೊತ್ತು ಸುಮ್ಮನೆ ಹೋಗುತಿದೆ ಕರ್ತ ತುರ್ತು ದೊರೆಯದನಕ ಚಿತ್ತ ಸ್ವಸ್ಥವಾಗದವ್ವ 2 ಭೂಮಿತ್ರಯದೊಳಧಿಕ ಕೇಳವ್ವ ಆತನಹೆಸರು ಕಾಮಿತವನೀಗರಿತುಕೊಂಡೆನವ್ವ ನೇಮದಿಂದ ಭಜಿಸುತಿಹೆನವ್ವ ಎನ್ನಕಡೆಗಾತ ಪ್ರೇಮದಿಂದ ಸುಳಿಯದಿಹ್ಯನವ್ವ ಭಾಮೆಬಾರೆಂದು ಬದಿಲಿಕರೆದು ಪ್ರೇಮದಿಂದ ಅಪ್ಪಿ ನಿನ್ನಯ ಸ್ವಾಮಿ ಶ್ರೀ ರಾಮ ನಾನೆಂದ್ಹೇಳಲು ಕ್ಷೇಮ ಪಡೆದು ಬಾಳ್ವೆನವ್ವ 3
--------------
ರಾಮದಾಸರು
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1 ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2 ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3 ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ. ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ1 ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ 2 ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ3 ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ 4 ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ 5 ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ6 ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ7
--------------
ವ್ಯಾಸರಾಯರು
ಬನ್ನಿರಿ ಬನ್ನಿರಿ ಪುರಜನರೆಲ್ಲರು ಕೃಷ್ಣನ ದರುಶನಕೆ ಪೋಗುವ ಪ ಕೃಷ್ಣನು ಜನಿಸಿದ ಈ ದಿನ ಇಷ್ಟವ ಪ್ರಾರ್ಥಿಸಲು ಪೋಗುವಅ.ಪ ದುಂದುಭಿ ನಾದವು ಕೇಳುತಿದೆ ಬಲು ಮಂದಿಯ ತಂಡವು ಹೋಗುತಿದೆ ಕಂದನ ರೂಪದಿ ಬಂದಿಹ ಆನಕ ದುಂದುಭಿ ಕುವರನ ಸಂಭ್ರಮ ನೋಡಲು 1 ಪೇಳಿರಿ ನಿಮ್ಮಯ ಕೊರತೆಗಳೆÀಲ್ಲವ ಕೇಳಿರಿ ವರಗಳ ಧೈರ್ಯದಲಿ ಬಾಲನು ಸುಲಭದಿ ಒಲಿಯುವ ಒಳ್ಳೆಯ ಕಾಲವಿದೆಲ್ಲರಿಗೆ ಬೇಗನೆ 2 ಜನುಮ ಜನುಮಗಳ ಪುಣ್ಯದ ರಾಶಿಯು ಜನುಮಾಷ್ಟಮಿ ದಿನದಿ ಲೋಕಕೆ ಜನುಮಾದ್ಯಷ್ಟಕದಾತನ ದರುಶನ ಮನಕೆ ಪ್ರಸನ್ನತೆ ಕೊಡುವುದು ಪೋಗುವ 3
--------------
ವಿದ್ಯಾಪ್ರಸನ್ನತೀರ್ಥರು
ಬಾರೋ ಬಾರೋ ಬಾರಯ್ಯ ಬಾರೊ ಸದ್ಗುರುಸ್ವಾಮಿ ಬಾರಯ್ಯ ಬಾರೊ ಮದ್ಗುರು ಸ್ವಾಮಿ ಬಾರಯ್ಯ ಬಾರೊ ಧ್ರುವ ಸ್ವರೂಪಸುಖ ನಿಜವನ್ನು ತೋರೊ ಹರುಷಾನಂದದನುಭವ ಬೀರೊ ಗುರುತವಾಗ್ಯೆನ್ನೊಳು ನಿತ್ಯವಿರೊ ತರಣೋಪಾಯದ ನಿಜಬೋಧ ನೀ ಸಾರೊ 1 ಕಣ್ಣುಕೆಂಗೆಂಡುತಾವೆ ಕಾಣದೆ ನಿಮ್ಮ ಪುಣ್ಯಚರಣ ತೋರೊ ಘನ ಪರಬ್ರಹ್ಮ ಚಿಣ್ಣಕಿಂಕರ ಅತಿದೀನ ನಾ ನಿಮ್ಮ ಧನ್ಯ ಧನ್ಯಗೈಸುವದೆನ್ನ ಜನುಮ 2 ಚಾಲ್ವರುತಾವೆ ಮನೋರಥಗಳು ಆಲೇಶ್ಯ ಮಾಡದಿರು ನೀ ಕೃಪಾಳು ಮೇರೆದಪ್ಪಿ ಹೋಗುತಿದೆ ದಿನಗಳು ಬಲು ಭಾಗ್ಯೊದಗಿಬಾಹುದು ನೀ ದಯಾಳು 3 ಹಾದಿ ನೋಡುತಿದೆ ಹೃದಯ ಕಮಲ ಸಾಧಿಸಿಬಾಹುದು ಮುನಿಜನ ಪಾಲ ಸಾಧುಹೃದಯ ನೀನಹುದೊ ಸಿರಿಲೋಲ ಛೇದಿಸೊ ನೀ ಬಂದು ಭವಭಯಮೂಲ 4 ಬಾರದಿದ್ದರೆ ಪ್ರಾಣ ನಿಲ್ಲದೊ ಎನ್ನ ಕರುಣಿಸಿಬಾಹುದು ಜಗನ್ಮೋಹನ ತರಳ ಮಹಿಪತಿಗೆ ನೀ ಜೀವಜೀವನ ಕರೆದು ಕರುಣ ಮಳೆಗೈಸು ಪಾವನ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಾಸುದೇವನ ನೆನೆದು ನೀ ಸುಖಿಯಾಗು ಮನವೆ | ಈ ಶರೀರದ ಭ್ರಾಂತಿ ಇನ್ಯಾಕೆ ಮನವೆ ಪ ಕಾಲುಗಳು ಕುಂದಿದವು ಕಣ್ಣದೃಷ್ಟಿ ಹಿಂಗಿದವು | ಮೇಲೆ ಯೌವನ ಹೋಗಿ ಮುಪ್ಪಾಯಿತು || ಕಾಲ ಕರ್ಮಂಗಳು ಒದಗಿದಾಕ್ಷಣದಲಿ | ಬೀಳುವ ತನುವಿನಾಶೆ ಇನ್ಯಾತಕೆಲೆ ಮರುಳೆ 1 ಧಾತುಗಳು ಹಿಂಗಿದವು ದಂತಗಳು ಸಡಲಿದವು | ಕಾಂತೆಯರು ನೋಡಿ ವಾಕರಿಸುವರು || ಭ್ರಾಂತಿ ಇನ್ಯಾಕೆ ಬಯಲಾದ ದೇಹಕ್ಕೆ ಇನ್ನು | ಅಂತರ ಮಾಡದೆ ಹರಿಯ ನೆನೆ ಮನವೆ 2 ನೀರ ಬೊಬ್ಬುಳಿಯಂತೆ ನಿಜವಲ್ಲ ದೇಹ | ಧಾರಣಿಯನು ಮೆಚ್ಚಿ ಮರುಳಾಗಿ ಕೆಡದೆ || ಶ್ರೀರಮಣ ವಿಜಯವಿಠ್ಠಲರಾಯ | ಸೋರಿ ಹೋಗುತಿದೆ ಸ್ವರ್ಗ ಸುಮ್ಮನಿರಬೇಡಾ 3
--------------
ವಿಜಯದಾಸ
ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ ಹೋಗುತಿದೆ ಮುತ್ತಿನಂಥಾ ದಿನದೊಳು | ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ ಉತ್ತುಮರ ಸಂಗಡದಲ್ಲಿ | ನಿತ್ಯ ಶ್ರವಣಮನನ ಮಾಡಿ | ಅತ್ತಲಿತ್ತಲಾಗದೆ | ಸು | ವೃತ್ತಿಯೊಳು ಬೆರಿಯಿರೋ 1 ಪಗಡಿ ಪಂಚಿಯಾಡಿ ಪರರಾ | ಬಗಲಿ ಕಳೆದು ಕಳೆವದೇನು | ಯುಗುತಿ ಹೀನ ರಾಗದೆ | ಪಥ ಪಡಿಯಿರೋ 2 ಮಂದ ಮತಿಯ ಕೊಂಡ್ಯಾಡಿ | ಮಂದ ಮತ್ತೆ ದೊರೆಯದಿದ್ದ | ಇಂದು ನಾಳೆಗೆನ್ನದೇ ಮು | ಕುಂದ ನಾಮವ ನೆನೆಯಿರೋ 3 ಇಂದು ನರದೇಹದಿಂದ | ಬಂದು ಬರಡ ಮಾಡಬ್ಯಾಡಿ | ತಂದೆ ಮಹಿಪತಿ ದಯ | ದಿಂದ ಮುಕ್ತಿಯ ಪಡೆಯಿರೋ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೋಗುತಿದೆ ಹೊತ್ತು ಬರಿದೆ ವ್ಯರ್ಥವಾಗಿಹರಿಗುರುಗಳ ನೆನೆಯದೆ ಪ. ನರರ ನೂರಮೂವತ್ತೆರಡುಕೋಟಿವರುಷ ದಿವಸವೊಂದೆ ಬೊಮ್ಮಗೆಪರೀಕ್ಷಿಸಲು ಬ್ರಹ್ಮಕಲ್ಪಸಾಸಿರ ಕೋಟಿನರಕದೊಳಗೆ ಬಿದ್ದು ಮರಳಿ ಭವದಿ ಬಂದು1 ಒಂದೊಂದಕೆ ಇಪ್ಪತ್ತೊಂದುಲಕ್ಷ ಯೋನಿಎಂದೆನಿಸುವ ಸ್ವೇದಜ ಉದ್ಬಿಜಬಂದು ಜರಾಯುಜಾಂಡಜ ಕುಲದಿ ಪುಟ್ಟಿನೊಂದೆ ಎಂಬತ್ತುನಾಲ್ಕುಲಕ್ಷ ಯೋನಿಯಲಿ 2 ಮಾಸ ಒಂಭತ್ತು ಮತಿಗೆಟ್ಟು ಗರ್ಭದಿಹೇಸದೆಬಂದು ಜೀವಿಸಿ ಬಳಲಿಮೋಸವನರಿಯದೆ ಮುನ್ನಿನ ಕರ್ಮದಿಘಾಸಿಯಾದೆನೊ ಯೌವನಮದದಿ ಸೊಕ್ಕಿ 3 ಕೆಲಹೊತ್ತು ಚದುರಂಗÀ ಪಗಡೆ ಆಟಗಳಿಂದಕೆಲಹೊತ್ತು ಹಸಿವೆ ನಿದ್ರೆಗಳಿಂದಲಿಕೆಲಹೊತ್ತು ಕಾಕಪೋಕರ ಕತೆಗಳಿಂದಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ 4 ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆವೇಳೆಯಿಲ್ಲದೆ ಹೋಯ್ತು ಬಂಜೆಯಾಗಿಜಾಲಿಸಿಹೋಗುತಿದೆ ಈ ವಿಧದಿ ಹೊತ್ತು ಬೇಗನೆಪಾಲಿಸಿ ದಯಮಾಡೊ ಸಿರಿಹಯವದನ 5
--------------
ವಾದಿರಾಜ
ದೋಷ ಎಣಿಸದೆ ಕಾಯೊ ಜೀಯಾ ಪಕಂಡ ಕಂಡವರ ಭಜಿಸೀ -ಬೇಡಿತೋಂಡವತ್ಸಲ ಕರುಣೆ ಸಲಿಸೀಪಾದಪುಂಡರೀಕ್ಯನ್ನೊಳಗೆ ಇರಿಸಿಕಾಯೋ 1ಮಾqಬಾರದ ಕೃತ್ಯವಾ - ನಾ ಬಲುಮಾಡಿದೆಗೃಹಕೃತ್ಯವಾಬೇಡದಕಿ ಭೃತ್ಯತ್ವವಾ - ಈ ದೋಷನೋಡದಲೆ ಭಕ್ತತ್ವವಾ ನೀಡೊ 2ದೀನ ಜನಪಾಲ ನಿನ್ನಾ-ರೂಪಧ್ಯಾನ ಮಾಡಿದೆ ಬಿಡದೆ ಘನ್ನಾ-ಗತಿಎನು ಪೇಳಯ್ಯಾ ಎನಗೆ ಮುನ್ನಾ ಸ್ವಾಮಿ 3ಗುರುರಾಘವೇಂದ್ರರಾಯ - ಎನ್ನಶರಣು ಪೊಕ್ಕೆನೊ ನಿನಗೆ ನಾನಯ್ಯಾ ಕರುಣೀ 4ಮಾತ ಪಿತ ಭ್ರಾತ್ರÀ ಬಂಧೂ - ಎನಗೆದಾತನಿನ್ನ ದೂತನೆಂದೂ- ಬಂದ-ನಾಥನನು ನೀ ಕಾಯುವುದು ಪ್ರಭುವೇ 5ಕರುಣಸಾಗರನೆ ಈಗ - ತವರೂಪಶರಣು ಪೊಕ್ಕವನ ವೇಗಾ-ಭವ-ಅರಣ ದಾಟಿಸುವಂಥ ಯೋಗಾ ಪೇಳಿ 6ಹೋಗುತಿದೆ ಹೊತ್ತು ಪದುಮಾಕ್ಷ -ಹ್ಯಾಗೆಆಗುವದೊ ನಿನ್ನಅಪರೋಕ್ಷಜಾಗುಮಾಡದೆಸಲಿಸ್ಯನ್ನಪೇಕ್ಷಾ ಸ್ವಾಮಿ7ಪಾರದೋಷಗಳನ್ನೆ ತಾಳೋಘೋರಅಙ್ಞÕನ ಕೀಳೋ- ಪರಲೋಕಸೇರಿಸೆನ್ನನು ಕೃಪಾಳೋ ಸ್ವಾಮಿ 8ಎಷ್ಟು ಪೇಳಲಿ ಎನ್ನ ತಾತಾ - ಕೃಪಾ -ದೃಷ್ಟಿಯಲಿನೋಡುನಾನಿನ್ನ ಪೋತಾಧಿಟ್ಟ ನೀಗುರುಜಗನ್ನಾಥಾ- ವಿಠಲನನಿನ್ನೊಳಗೆ ತೋರೋದಾತಾಖ್ಯಾತಾ9
--------------
ಗುರುಜಗನ್ನಾಥದಾಸರು
ಸುಲಭಪೂಜೆಯಕೇಳಿ ಬಲವಿಲ್ಲದವರು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಾಲಕಾಲದಕರ್ಮಕಮಲಾಕ್ಷಗರ್ಪಿಸಿರಿಪ.ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |ಮರುವುಡುವ ಧೋತರವು ಪರಮವಸ್ತ್ರ ||ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯುಮರಳಿ ಹೊಡಮರುಳುವುದು ನೂರೆಂಟು ದಂಡ 1ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವುಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||ನಡುಮನೆಯ ಅಂಗಳವುಉಡುಪಿ ಭೂವೈಕುಂಠಎಡ ಬಲದ ಮನೆಯವರು ಕಡುಭಾಗವತರು 2ಹೀಗೆ ಈ ಪರಿಯಲಿನಿತ್ಯ ನೀವರಿತಿರಲುಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||ಬೇಗದಿ ತಿಳಿದುಕೇಳಿ ಹೋಗುತಿದೆ ಆಯುಷ್ಯಯೋಗಿಪುರಂದರವಿಠಲ ಸಾರಿ ಪೇಳಿದನು3
--------------
ಪುರಂದರದಾಸರು