ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುನೋಡು ನೋಡು ಕೃಷ್ಣಾ |ಹೇಗೆ ಮಾಡುತಾನೆ |ಬೇಡಿಕೊಂಡರೆ ಬಾರ ಕೃಷ್ಣ |ಓಡಿ ಹೋಗುತಾನೆ ಪಕಂಡಕಂಡವರ ಮೇಲೆ ಕಣ್ಣು ಹಾಕುತಾನೆ |ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ ||ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ |ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ 1ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ |ಶರಣು ಹೊಕ್ಕರೆಯು ತಾನು ಕೊಡಲಿ ಮಸೆಯುತಾನೆ ||ಹರಿಯುವ ವಾನರರ ಕೊಡ ಹಾರಾಡುತಾನೆ |ಸಿರಿಕೃಷ್ಣ ಹಾಲು - ತುಪ್ಪ ಸೂರೆಮಾಡುತಾನೆ 2ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ |ನೀಲಗುದುರೆಯನೇರಿ ಹಾರಿಸಾಡುತಾನೆ ||ಬಾಲಕರ ಕೂಡಿಕೊಂಡು ಕುಣಿದಾಡುತಾನೆ |ಲೋಲಪುರಂದರ ವಿಠಲ ತಾನು ಕುಣಿಯುತಾನೆ3
--------------
ಪುರಂದರದಾಸರು