ಓಡುತ ಹೋಗುತಾದೋ ಹೊತ್ತು ನೀನು
ನೋಡೇನೆಂದರೆ ಆಗದು ಮತ್ತು ಪ
ಬೇಡಲು ಬಿಡದೆಲೊ ಹೆಡತಲೆಮೃತ್ಯು
ಹುಡುಕಾಡಿ ಪಡಕೋ ನೀ ಕೆಡದ ಸಂಪತ್ತು ಅ.ಪ
ಗಜಿಬಿಜಿಸಂಸಾರ ಸೂಡಿಗೆ ನೀನು
ಗಿಜಿಗಿಜ್ಯಾಗದೆ ನಿಲ್ಲು ಕಡೆಗೆ
ಸುಜನರಿಗೊಂದಿಸಿ ಭುಜಗಾದ್ರಿಶಯನನ
ನಿಜಪದ ಮಜದಿಂದ ಭಜಿಸಿಕೋ ತುರ್ತು 1
ಕಾಳನಾಳಿನ ದಾಳಿಗೆಲಿದು ಸ್ಥಿರ
ಬಾಳುವ ನಿಜಪದವರಿದು
ನೀಲಶಾಮನ ಲೀಲೆ ಮೇಲೆಂದ್ಹಿಗ್ಗುವ ದಾಸ
ರ್ಹೇಳಿಕೆ ಕೇಳಿ ನೀ ಪಾಲಿಸು ತುರ್ತು 2
ನಡೆನುಡಿ ಎರಡೊಂದೆ ಮಾಡೊ ಇನ್ನು
ಜಡಮತಿ ಗಡನೆ ಈಡ್ಯಾಡೋ
ಪೊಡವಿಗಧಿಕ ನಮ್ಮ ಒಡೆಯ ಶ್ರೀರಾಮನೆಂ
ದ್ಹೊಡಿ ಹೊಡಿ ಡಂಗುರ ದೃಢವಾಗಿ ಅರ್ತು3