ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣೇತಿ ಮಂಗಳಂ ದಿವ್ಯನಾಮ ಪಇಷ್ಟರಿಂದಲಿ ಭವಬಂಧನನಷ್ಟವಾಗಿ ಹೋಹುದೋ ಅ.ಪನಾರದಮುನಿ ತಾನು ನರಕ ಪಟ್ಟಣಕೆ ಹೋಗಿವಾರೀಜನಾಭ ಎಂದು ಒದರಿದಾಗ ||ಘೋರ ಪಾತಕವೆಲ್ಲ ದೂರವಾಗಿ ಹೋಯ್ತುಸೂರೆಯಾಯಿತು ಸ್ವರ್ಗಲೋಕವೆಲ್ಲ 1ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆನಿಜಪದವಿಯೈದಿದನು ನಿಮಿಷದಲಿ ||ಭುಜಗಭೂಷಣನು ತಾ ಶ್ರೀರಾಮನಾಮವನಿಜಕಾಂತೆಯನು ಕರೆದು ಉಪದೇಶವಿತ್ತ 2ಪಂಚಪಾಂಡವರನು ಪರಿಪಾಲಿಸಿತು ನಾಮಪಾಂಚಾಲೀ ಮೊರೆಕೇಳಿ ಪೊರೆಯಿತು ನಾಮ ||ವಂಚನೆ ಮಾಡಿ ಕೌರವರ ಮಡುಹಿ ನಿ -ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ 3ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿಕರಿರಾಜ ಹರಿಯೆಂದು ಮೊರೆಯಿಡಲು ||ತ್ವರಿತದಿಂದಲಿ ಬಂದು ಕರಿಯನುದ್ಧರಿಸುತಕರಿರಾಜವರದನೆಂದೆನಿಸಿಕೊಂಡ ನಾಮ 4ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆಅವನ ಮಲತಾಯಿ ಗರ್ಜಿಸಿದಳಾಗ ||ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿಸವಿಯಾದಚಲಪದವ ಪಡೆದನಾಗ 5ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆಗಿರಿಯ ಶಿಖರದಿಂದೀಡಾಡಲು ||ನರಹರೆ ನರಹರೆ ರಕ್ಷಿಸೆಂದನ್ನಲುನರಸಿಂಹ ರೂಪದಿಂದವನ ಪಾಲಿಸಿದ 6ಕಂದನ ಅಪರಾಧವ ಕೇಳದೆ ನೃಪನು ತಾನಂದತಿ ದಾರುಣ ಕಡಹದೋಳು ಕೆಡಹೆ ||ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿಬೆಂದು ಕಂದಿವ ಎಣ್ಣೆ ತಣ್ಣೀರಾಯಿತು 7ಅಸುರ ಬಾಧೆಗೆ ಸಿಲುಕಿ ಅಶೋಕವನದಲಿಶಶಿಮುಖಿ ಬೀಜಮಂತ್ರವ ಜಪಿಸೆ ||ಅಸುರನ ಕೊಂದು ಅಶೋಕವನವ ಬಿಡಿಸಿವಸುಧೀ ಸುತೆಯ ಸಲಹಿದ ರಾಮನಾಮ 8ಪರಿಪರಿ ಭಕ್ತರನು ಪಾಲಿಸಿತು ಈ ನಾಮಪರಮ ಮಂಗಲವು ಪಾವನವು ಈ ನಾಮ ||ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮಧರೆಯೊಳುಸಿರಿಪುರಂದರ ವಿಠಲ ನಾಮ9
--------------
ಪುರಂದರದಾಸರು